HomePolitics Newsನಿಮ್ಮ ಮನೆ ಮಗನನ್ನು ಗೆಲ್ಲಿಸಿ : ಜಯಲಕ್ಷ್ಮಿ ಗಡ್ಡದೇವರಮಠ

ನಿಮ್ಮ ಮನೆ ಮಗನನ್ನು ಗೆಲ್ಲಿಸಿ : ಜಯಲಕ್ಷ್ಮಿ ಗಡ್ಡದೇವರಮಠ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅನೇಕ ಯೋಜನೆಗಳನ್ನು ನೀಡಿದೆ. ಇಂತಹ ಯೋಜನೆ ನೀಡಿದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠರನ್ನು ಗೆಲ್ಲಿಸುವ ಜವಾಬ್ದಾರಿ ಕ್ಷೇತ್ರದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಆನಂದಸ್ವಾಮಿಯವರ ಮಾತೋಶ್ರೀ ಜಯಲಕ್ಷ್ಮಿ ಗಡ್ಡದೇವರಮಠ ಹೇಳಿದರು.

ಅವರು ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಪರವಾಗಿ ತಾಲೂಕಿ ಶಿಗ್ಲಿ, ಸೂರಣಗಿ, ವಡೆಯರಮಲ್ಲಾಪೂರ, ನಾಯಿಕೆರೂರು ಗ್ರಾಮಗಳೂ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಪ್ರಚಾರ ಕಾರ್ಯ ಕೈಗೊಂಡು ಮಾತನಾಡಿದರು.

ಆನಂದ ತನ್ನ ಕಾಲೇಜು ದಿನಗಳಿಂದಲೇ ಪಕ್ಷದಲ್ಲಿ ಗುರುತಿಸಿಕೊಂಡು ಅನೇಕ ಚುನಾವಣೆಗಳನ್ನು ಎದುರಿಸಿದ್ದಾನೆ. ಸದಾ ಸಮಾಜದ ಜನರ ಕಷ್ಟ, ನೋವುಗಳಿಗೆ ಸ್ಪಂದಿಸುವ ಗುಣ ಬೆಳೆಸಿಕೊಂಡಿರುವ ಸಮಾಜಮುಖಿ ವ್ಯಕ್ತಿಯಾಗಿದ್ದಾನೆ. ಅವರ ತಂದೆ ಜಿ.ಎಸ್. ಗಡ್ಡದೇವರಮಠರು ಎರಡು ಬಾರಿ ಶಾಸಕರಾಗಿ ಕ್ಷೇತ್ರದಲ್ಲಿ ಮಾಡಿರುವ ಜನಪರ ಕೆಲಸಗಳು, ಪಕ್ಷದ ಗ್ಯಾರಂಟಿ ಯೋಜನೆಗಳು ಹಾಗೂ ಕ್ಷೇತ್ರ ವ್ಯಾಪ್ತಿಯಲ್ಲಿ ಯುವ ಸಮೂಹ ಆನಂದಸ್ವಾಮಿಯವರನ್ನು ಬೆಂಬಲಿಸುತ್ತಿದ್ದು, ಅವರ ಆಯ್ಕೆಯಾದರೆ ಕ್ಷೇತ್ರದ ಅಭಿವೃದ್ಧಿ ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಮಂಜಣ್ಣ ಅತ್ತಿಗೇರಿ, ಮಹ್ಮದಸಾಬ ನಧಾಪ್, ಯಲ್ಲಪ್ಪ ತಳವಾರ, ರಾಜು ಓಲೇಕಾರ, ನಿಂಗಪ್ಪ ಪಶುಪತಿಹಾಳ, ಸೋಮಶೇಖರಯ್ಯ ವಿರಕ್ತಮಠ, ನಿಂಗಪ್ಪ ಕಾಗಿ, ರಾಜು ಪಾಟೀಲ, ಶಶಿಧರ ಪಾಟೀಲ, ನಾಗರಾಜ ಕಡ್ಲಿಬಾಳಮಠ, ನಾಗರಾಜ ದೇಸಾಯಿ ಸೇರಿದಂತೆ ನೂರಾರು ಕಾರ್ಯಕರ್ತರು, ಮುಖಂಡರು ಹಾಜರಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!