ಹರಿಶ್ರೀ ವೈ.ಜೆ ಅವರ ಪುಸ್ತಕ `ಚಿತ್ರಾಕ್ಷರ’ ಬಿಡುಗಡೆ ಕಾರ್ಯಕ್ರಮ ಇಂದು

0
book release
Spread the love

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಕನ್ನಡ ಪ್ರಕಾಶನ ಪ್ರಕಟಿಸಿರುವ ಲೇಖಕ ಹರಿಶ್ರೀ ವೈ.ಜೆ ಅವರ `ಚಿತ್ರಾಕ್ಷರ’ ಪುಸ್ತಕ ಬಿಡುಗಡೆ ಕಾರ್ಯಕ್ರಮ ಪಟ್ಟಣದ ರೋಣ ರಸ್ತೆಯ ರೇವಡಿ ಅವರ ಪ್ಲಾಟ್‌ನಲ್ಲಿ ಏ.14ರ ಸಾಯಂಕಾಲ 4 ಗಂಟೆಗೆ ನಡೆಯಲಿದೆ ಎಂದು ಕನ್ನಡ ಪ್ರಕಾಶನದ ಪುಂಡಲೀಕ ಕಲ್ಲಿಗನೂರ ತಿಳಿಸಿದ್ದಾರೆ.

Advertisement

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಚಿತ್ರಾಕ್ಷರ ಪುಸ್ತಕ ಕುರಿತು ಲಲಿತಕಲಾ ಮೀಮಾಂಸಕರಾದ ಕೆ.ವಿ. ಸುಬ್ರಮಣ್ಯಂ ಅವರ ಚಿತ್ರ ಮತ್ತು ಸಾಹಿತ್ಯಗಳ ಪಕ್ಷಿನೋಟವನ್ನು ದಾಖಲಿಸುವ ಪುಸ್ತಕವನ್ನು ಯುವ ಬರಹಗಾರ್ತಿ ಹರಿಶ್ರೀ ವೈ.ಜೆ. ಬರೆದಿದ್ದಾರೆ. ಕೆ.ವಿ. ಸುಬ್ರಮಣ್ಯಂ ಬರಹಗಾರರು, ಕಲಾವಿದರೂ ಹೌದು. ಬೆಟ್ಟಗುಡ್ಡಗಳನ್ನು ಅಲೆಯುತ್ತಾ ಗಿರಿ, ಕಂದಕಗಳಲ್ಲಡಗಿರುವ ಪುರಾತನ ಜನ ವಾಸ್ತವ್ಯಗಳನ್ನು ಹುಡುಕುತ್ತಾ ಅವರ ಶಿಲಾನೆಲೆಗಳನ್ನು ದಾಖಲಿಸುವುದರ ಜತೆಗೆ ಅಲ್ಲಿಯ ಆದಿಮ ಚಿತ್ರಕಲೆಯ ಅನ್ವೇಷಣೆಗಳನ್ನೂ ನಡೆಸಿ, ಕನ್ನಡ ಮತ್ತು ಇಂಗ್ಲೀಷ್ ಪತ್ರಿಕೆಗಳಿಗೆ ಬರೆದ ಹೆಗ್ಗಳಿಕೆ ಇವರದ್ದಾಗಿದೆ.

ಈ ಕಾರ್ಯಕ್ರಮದಲ್ಲಿ ಕಲಬುರಗಿ ವಿಶ್ವವಿದ್ಯಾಲಯದ ಕಲಿತ ಕಲಾ ವಿಭಾಗದ ಮುಖ್ಯಸ್ಥ ಡಾ. ಶಿವಾನಂದ ಬಂಟನೂರ, ಬುಕ್‌ಬ್ರಹ್ಮ ಸಂಪಾದಕ ದೇವು ಪತ್ತಾರ ಹಾಗೂ ಕಲಾವಿದ ಗದುಗಿನ ಬಣ್ಣದ ಮನೆಯ ವಿಜಯ್ ಕಿರೇಸೂರ್ ಮಾತನಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜುಳಾ ಐ.ರೇವಡಿ ವಹಿಸಿಕೊಳ್ಳಲಿದ್ದಾರೆ. ಪ್ರೊ. ಬಿ.ಎ. ಕೆಂಚರಡ್ಡಿ ಕಾರ್ಯಕ್ರಮದ ಪ್ರಸ್ತಾವನೆ ಜವಾಬ್ದಾರಿ ನಿರ್ವಹಿಸುತ್ತಾರೆ. ಚಿತ್ರಾಕ್ಷರದ ಲೇಖಕ ಹರಿಶ್ರೀ ವೈ.ಜೆ. ಕಾರ್ಯಕ್ರಮದಲ್ಲಿ ಉಪಸ್ಥಿತರಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ವತಃ ಕಲಾವಿದರಾದ ಇವರು ಲಲಿತಕಲಾ ಲೋಕವನ್ನು ಕಂಡು, ಹಿರಿ-ಕಿರಿಯ ಕಲಾವಿದರನ್ನು ಕುರಿತು ಬರೆದು ಅವರ ಚಿತ್ರಕಲಾ ಹೆಜ್ಜೆಗಳನ್ನು ಗುರುತಿಸಿ, ಕಲೆಯ ರಸಸ್ವಾದವನ್ನು ಕರ್ನಾಟಕದ ಪತ್ರಿಕೆಗಳಲ್ಲಿ ತಮ್ಮ ಅಂಕಣಗಳ ಮೂಲಕ ದಾಖಲಿಸುತ್ತಾ ಈ ನೆಲದ ಕಲಾ ಶ್ರೀಮಂತಿಕೆಯನ್ನು ನಾಡಿಗೆ ಪರಿಚಯಿಸಿದ್ದಾರೆ. ಕೆ.ವಿ. ಸುಬ್ರಮಣ್ಯಂ ಕುರಿತಾದ ಚಿತ್ರಾಕ್ಷರ ಪುಸ್ತಕವು ಗಜೇಂದ್ರಗಡದ ಕಲಾವಿದ ಪುಂಡಲೀಕ ಕಲ್ಲಿಗನೂರ, ಕನ್ನಡ ಪ್ರಕಾಶನದ ಮೂಲಕ ಪ್ರಕಟಿಸಿ ಲೋಕಾರ್ಪಣೆಗೊಳಿಸಲು ಸಿದ್ಧರಾಗಿದ್ದಾರೆ.

 


Spread the love

LEAVE A REPLY

Please enter your comment!
Please enter your name here