ಬಳ್ಳಾರಿ:- ಜಿಲ್ಲೆಯ ಸಂಡೂರು ತಾಲೂಕಿನ ಹಿರಾಳ್ ಗ್ರಾಮದಲ್ಲಿ ಅವಘಡ ಒಂದು ಸಂಭವಿಸಿದೆ. ರೈತರ ಜಮೀನಿನಲ್ಲಿ ಅಳವಡಿಸಿದ ವಿಂಡ್ ಫ್ಯಾನ್ ಹೊತ್ತಿ ಉರಿದಿದೆ.
Advertisement
ಇದೇ ಗ್ರಾಮದ ರೈತರಾದ ವೀರೇಶ್, ಕುಮಾರಸ್ವಾಮಿ ಹಾಗೂ ರಾಮಾಂಜನೇಯ ಎನ್ನುವವರ ಜಮೀನಿನಲ್ಲಿ ಖಾಸಗಿ ಕಂಪನಿ ಅಳವಡಿಸಿದ್ದ ವಿಂಡ್ ಫ್ಯಾನ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ವಿಂಡ್ ಫ್ಯಾನ್ ಹೊತ್ತಿ ಉರಿದಿದೆ.
ಬೆಂಕಿಯಿಂದಾಗಿ ಜಮೀನಿನಲ್ಲಿ ದಟ್ಟ ಹೊಗೆ ಆವರಿಸಿದೆ. ದಟ್ಟ ಹೊಗೆ ಕಂಡು ಗ್ರಾಮದ ಜನ ಬೆಚ್ಚಿಬಿದ್ದಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.