ಬೆಂಗಳೂರು : ಮನೆ ಕೆಲಸಾದಳು ಲಿಫ್ಟ್‌ನಲ್ಲಿ ಸಾಕು ನಾಯಿಯನ್ನು ಮನಬಂದಂತೆ ಬಟ್ಟೆ ಸೆಳೆದಂತೆ ಎತ್ತಿ ಬಿಸಾಡಿ ಕ್ರೂರವಾಗಿ ಹತ್ಯೆಗೈದಿರುವ ಪ್ರಕರಣ ಸಂಬಂಧ ಆರೋಪಿ ಮಹಿಳೆಯನ್ನು ಅರೆಸ್ಟ್ ಮಾಡಲಾಗಿದೆ. ಪುಷ್ಪಲತಾ ಬಂಧಿತ ಮನೆಕೆಲಸದಾಕೆಯಾಗಿದ್ದು,
ಮನೆ ಮಾಲಿಕೆ ಕೆ.ಆರ್.ರಾಶಿಕಾ ದೂರಿನ ಮೇರೆಗೆ ಆಕೆಯನ್ನು ಬಂಧಿಸಿ ಎಫ್‌ಐಆರ್ ದಾಖಲಿಸಲಾಗಿದೆ. ಮನೆ ಮಾಲಿಕರು ಹೊರ ಹೋಗಿದ್ದಾಗ ನಾಯಿಯನ್ನು ಎಳೆತಂದು ಲಿಫ್ಟ್‌ನಲ್ಲಿ ಪುಷ್ಪಲತಾ ಕ್ರೌರ್ಯ ಮೆರೆದಿದ್ದಾಳೆ.
ಪುಷ್ಪಲತಾ ಲಿಫ್ಟ್‌ನಲ್ಲಿ ನಾಯಿಯನ್ನು ಅಮಾನವೀಯವಾಗಿ ಕೊಲೆ ಮಾಡಿದ್ದಳು. ಬಟ್ಟೆ ಒಗೆಯುವಂತೆ ನಾಯಿಯನ್ನು ಹಿಡಿದು ನೆಲಕ್ಕೆ ಬಡಿದು ಉಸಿರುಗಟ್ಟಿಸಿ ಸಾಯಿಸಿದ್ದಾಳೆ ಎಂದು ತಿಳಿದುಬಂದಿದೆ.
ಈ ಕೃತ್ಯದ ನಂತರ ನಾಯಿ ಸತ್ತು ಹೋಗಿದೆ ಎಂದು ಮಾಲೀಕರಿಗೆ ಸುಳ್ಳು ಕಥೆ ಹೇಳಿ ಆಕೆಯನ್ನು ನಂಬಿಸಲು ಯತ್ನಿಸಿದ್ದಾಳೆ. ನಾಯಿಯ ಸಾವಿನ ಬಗ್ಗೆ ಮಾಲೀಕರಿಗೆ ಅನುಮಾನ ಮೂಡಿದ್ದು, ಕಟ್ಟಡದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಪುಷ್ಪಲತಾಳ ಕ್ರೂರ ಕೃತ್ಯ ಬೆಳಕಿಗೆ ಬಂದಿದೆ.
ದೃಶ್ಯಗಳಲ್ಲಿ ನಾಯಿಯನ್ನು ಕೊಲೆ ಮಾಡುತ್ತಿರುವ ಸ್ಪಷ್ಟ ಚಿತ್ರಣ ಕಂಡುಬಂದಿದೆ. ತಕ್ಷಣ ರಾಶಿಕಾ, ಆರೋಪಿತೆ ಪುಷ್ಪಲತಾ ವಿರುದ್ಧ ಬಾಗಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ನಾಯಿಯನ್ನ ಎಷ್ಟು ಎಳೆದ್ರೂ ಲಿಫ್ಟ್ ಒಳಗೆ ಬರಲಿಲ್ಲ. ಹೀಗಾಗಿ ಕೋಪಗೊಂಡು ನೆಲಕ್ಕೆ ಬಡಿದಿದ್ದಾಗಿ ಆರೋಪಿತೆ ಪುಷ್ಪಲತಾ ಹೇಳಿದ್ದಾಳೆ.


