ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿ. ಈ ಹಬ್ಬಕ್ಕೆ ಮುನ್ನುಡಿ ರೊಟ್ಟಿ ಪಂಚಮಿ. ಭಾನುವಾರದಂದು ನರೇಗಲ್ಲ ಹೋಬಳಿಯಾದ್ಯಂತ ತಮ್ಮ ನೆಚ್ಚಿನ ಹಬ್ಬವಾದ ರೊಟ್ಟಿ ಪಂಚಮಿಯನ್ನು ಸಂಭ್ರಮದಿಂದ ಆಚರಿಸಿದ ನಾರಿಯರು ರೊಟ್ಟಿ ವಿನಿಮಯ ಮಾಡಿಕೊಂಡು ಸಂತಸಪಟ್ಟರು.
ಜಕ್ಕಲಿ ಗ್ರಾಮದಲ್ಲಿ ಮಹಿಳೆಯರು, ಮಕ್ಕಳು ವಿವಿಧ ಹೊಸ ಬಗೆಯ ಉಡುಪುಗಳನ್ನು ಧರಿಸಿ ನೆರೆ-ಹೊರೆ ಮನೆ ಮನೆಯಲ್ಲೂ ಸಂಭ್ರಮದೊಂದಿಗೆ ರೊಟ್ಟಿ ಹಂಚುವುದು ಎಲ್ಲೆಡೆ ಕಂಡು ಬಂದಿತು. ರೊಟ್ಟಿ ಪಂಚಮಿ ಉತ್ತರ ಕರ್ನಾಟಕದಲ್ಲಿಯೇ ಮಹಿಳೆಯರ ಅಚ್ಚುಮೆಚ್ಚಿನ ಹಬ್ಬ. ಕಳೆದ ಒಂದು ವಾರದಿಂದ ವಿವಿಧ ಬಗೆಯ ಜೋಳದ ರೊಟ್ಟಿ, ಸಜ್ಜಿರೊಟ್ಟಿ, ಎಳ್ಳುರೊಟ್ಟಿ, ಗುರೆಳ್ಳು ಚೆಟ್ನಿ, ಚಪಾತಿ, ಹಿಟ್ಟಿನ ಪಲ್ಯ, ಹೆಸರುಕಾಳು ಪಲ್ಯ, ಮಡಿಕೆಕಾಳು ಪಲ್ಯ ತಯಾರಿಸಿಕೊಂಡು ಮನೆಯ ದೇವರಿಗೆ ಪೂಜೆಯೊಂದಿಗೆ ನೈವೇದ್ಯ ಸಲ್ಲಿಸಿದರು.
ಮುಂಜಾನೆಯಿಂದ ಪ್ರಾರಂಭವಾದ ಈ ರೊಟ್ಟಿ ಹಂಚುವ ಕಾರ್ಯ ಇಳಿ ಹೊತ್ತಿನವರೆಗೂ ನಡೆಯಿತು. ಈ ಕಾರ್ಯಕ್ರಮದಲ್ಲಿ ಗ್ರಾಮದ ಮೆಣಸಗಿಯವರ ಓಣಿಯ ಶರಣಮ್ಮ ನರೇಗಲ್ಲ, ನಂದಾ ಮೆಣಸಗಿ, ಬಸವಣ್ಣೆಮ್ಮ ಸೋಮನಕಟ್ಟಿ, ದೇವಕ್ಕ ಪಲ್ಲೇದ, ಗುರುಬಸವ್ವ ಗೆದಗೇರಿ, ಭೀಮವ್ವ ಕರೇಕುಲದ, ಕಳಕವ್ವ ಅಂಗಡಿ, ಶಿಲ್ಪಾ ಮೆಣಸಗಿ, ಬಸವಣ್ಣೆಮ್ಮ ನರೇಗಲ್ಲ, ಶಾರದಾ ಬುಳ್ಳಾ, ವಿಜಯಲಕ್ಷ್ಮೀ ಪಲ್ಲೇದ, ಕೀರ್ತಿ ಮೆಣಸಗಿ, ವೈಷ್ಣವಿ ಹೂಗಾರ, ಲಕ್ಷ್ಮೀ ಮಡಿವಾಳರ, ಪ್ರತೀಕ್ಷಾ ಮಂಗಳಗುಡ್ಡ, ಕೃತಿಕಾ ಮೆಣಸಗಿ, ನಂದೀತಾ ಕರೇಕುಲದ ಇನ್ನಿತರರು ಇದ್ದರು.



