ವೈದ್ಯರು ದೇವರ ಸಮಾನ : ರೋ. ವಿಜಯಕುಮಾರ್ ಹಿರೇಮಠ

0
World Doctor's Day
Spread the love

ವಿಜಯಸಾಕ್ಷಿ ಸುದ್ದಿ, ಗದಗ : `ವೈದ್ಯೋ ನಾರಾಯಣೊ ಹರಿಃ’ ಎಂಬ ನಾಣ್ಣುಡಿಯಂತೆ ವೈದ್ಯರು ದೇವರ ಸಮಾನರಾಗಿದ್ದಾರೆ. ರೋಗಿಗಳನ್ನು ಆರೋಗ್ಯವಂತರಾಗಿ ಮಾಡಿ ಸುಖೀ ಜೀವನ ನಡೆಸಲು ಅನುವು ಮಾಡಿಕೊಡುತ್ತಾರೆ. ಸಮಸ್ತ ವೈದ್ಯರು ಸೇವೆಗೆ, ಶ್ಲಾಘನೆಗೆ ಹಾಗೂ ಸನ್ಮಾನಕ್ಕೆ ಪಾತ್ರರಾದವರು ಎಂದು ರೋಟರಿ ಗದಗ ಸೆಂಟ್ರಲ್‌ನ ಅಧ್ಯಕ್ಷ ರೋ. ವಿಜಯಕುಮಾರ್ ಹಿರೇಮಠ ಹೇಳಿದರು.

Advertisement

ರೋಟರಿ ಕ್ಲಬ್‌ನ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಲವು ವರ್ಷಗಳಿಂದ ಸಮಾಜದಲ್ಲಿ ವೈದ್ಯ ವೃತ್ತಿಯಿಂದ ಸೇವೆ ಸಲ್ಲಿಸುತ್ತಿರುವ ಹಾಗೂ ವೈದ್ಯ ವೃತ್ತಿಗೆ ಸಹಾಯಕವಾಗಿ ಕಾರ್ಯನಿರ್ವಹಿಸುತ್ತಿರುವ ರೋಟರಿ ಗದಗ ಸೆಂಟ್ರಲ್‌ನ ಸದಸ್ಯರು, ಹಿರಿಯ ವೈದ್ಯರಾದ ಡಾ. ಸಿ.ಬಿ. ಹಿರೇಗೌಡರ್ ಹಾಗೂ ಕಾರ್ಯದರ್ಶಿಗಳಾದ ಡಾ. ಸಂತೋಷ ತೋಟಗಂಟಿಮಠ ಇವರನ್ನು ವಿಶ್ವ ವೈದ್ಯರ ದಿನಾಚರಣೆಯ ಅಂಗವಾಗಿ ಕ್ಲಬ್ ವತಿಯಿಂದ ಸನ್ಮಾನಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ರೋಟರಿ ಸಹಾಯಕ ಗವರ್ನರ್ ರೊ. ಲಿಂಗರಾಜ ಗುಡಿಮನಿ, ಖಜಾಂಚಿಯಾದ ರೊ. ಸುನೀಲ್ ಕಬಾಡಿ ಹಾಗೂ ಎಲ್ಲ ಸದಸ್ಯರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here