Homecultureರಾಯರು ಸಕಲರನ್ನೂ ಅನುಗ್ರಹಿಸಲಿ

ರಾಯರು ಸಕಲರನ್ನೂ ಅನುಗ್ರಹಿಸಲಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ರಾಘವೇಂದ್ರ ಸ್ವಾಮಿಗಳ ಆರಾಧನೆಯ ನಿಮಿತ್ತ ಗುರುವಾರ ರಾಯರ ರಥೋತ್ಸವವು ಅಪಾರ ಭಕ್ತ ಸಮೂಹದ ನಡುವೆ ಶೃದ್ಧಾ, ಭಕ್ತಿ ಮತ್ತು ವಿಜೃಂಭಣೆಯಿಂದ ಪಟ್ಟಣದಲ್ಲಿ ಜರುಗಿತು. ಭಕ್ತರು ವೇದಘೋಷ, ವಾದ್ಯವೈಭವಗಳೊಂದಿಗೆ ಭಕ್ತಿ ಸಂಗೀತದ ನಾದಕ್ಕೆ ಹೆಜ್ಜೆ ಹಾಕುತ್ತಾ ಸಾಗಿದರು.

Worship of Shri Guru Raghavendra by Vijrambhane

ದೇವಸ್ಥಾನದಲ್ಲಿ ಸುಪ್ರಭಾತ, ಅಷ್ಟೋತ್ತರ, ಹರಿವಾಯು ಸ್ತುತಿ, ಅಭಿಷೇಕ ಅಲಂಕಾರ ಪೂಜೆ, ಅನ್ನಸಂತರ್ಪಣೆ, ಸಂಜೆ ತಾರತಮ್ಯ ಭಜನೆ, ಉಪನ್ಯಾಸ, ಸ್ಥಳೀಯರಿಂದ ಸಂಗೀತ ಸೇವೆಗಳು ನಡೆದವು. ರಥೋತ್ಸವದ ನಂತರ ಶ್ರೀಮಠದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಮಠದ ಧರ್ಮದರ್ಶಿ ಹನುಮಂತಾಚಾರ್ಯ ಹೊಂಬಳ ಅವರು, ನಂಬಿದ ಭಕ್ತರನ್ನು ರಾಯರು ಕೈಬಿಡುವುದಿಲ್ಲ. ನೂರಾರು ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಪಟ್ಟಣದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಎಲ್ಲರ ಸಹಕಾರದಿಂದ ಆರಾಧನೆ ಸೇರಿ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ.

ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ರಾಯರ ಕಾರ್ಯಕ್ರಮವನ್ನು ಎಲ್ಲ ಸಮಾಜ ಬಾಂಧವರು ಪಾಲ್ಗೊಂಡು ಯಶಸ್ವಿಗೊಳಿಸುವ ಸಂಪ್ರದಾಯ ನಮ್ಮ ಭಾಗದಲ್ಲಿ ಉತ್ತಮ ಪರಂಪರೆಯಾಗಿದೆ. ಆರಾಧನೆ ಕಾರ್ಯಕ್ರಮ ಯಶಸ್ವಿಯಾಗಿರುವದಕ್ಕೆ ಎಲ್ಲರಿಗೂ ರಾಯರು ಆಶೀರ್ವದಿಸಲಿ ಎಂದರು.

ಈ ಸಂದರ್ಭದಲ್ಲಿ ಬ್ರಹ್ಮವೃಂದದ ಅಧ್ಯಕ್ಷ ಗೋಪಾಲ ಪಡ್ನಿಸ್, ವ್ಹಿ.ಎಲ್. ಪೂಜಾರ, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಚಂಬಣ್ಣ ಬಾಳಿಕಾಯಿ, ಶರಣು ಗೋಡಿ, ಶಂಕರ ಬೆಟಗೇರಿ, ಕೆ.ಎಸ್. ಕುಲಕರ್ಣಿ, ಎ.ಪಿ. ಕುಲಕರ್ಣಿ, ವೆಂಕಟೇಶ ಗುಡಿ, ಗುರುರಾಜ ಪಾಟೀಲಕುಲಕರ್ಣಿ, ವೇದವ್ಯಾಸ ಹೊಂಬಳ, ಅರವಿಂದ ದೇಶಪಾಂಡೆ, ಮನೋಜ ಹೊಂಬಳ, ಅನಿಲ ಕುಲಕರ್ಣಿ, ಮಹೇಶ ಹೊಗೆಸೊಪ್ಪಿನ್, ಶರಣು ಗೋಡಿ, ಬಾಬು ಅಳವಂಡಿ, ಗಂಗಾಧರ ಗೋಡಿ, ಶ್ರೀಪಾದರಾಜ ಹೊಂಬಳ, ಗುರುರಾಜ ಸುಳ್ಳದ, ಕೃಷ್ಣ ಕುಲಕರ್ಣಿ (ತಂಗೋಡ), ರಾಘವೇಂದ್ರ ಗೊಗ್ಗಿ, ಕೃಷ್ಣಕುಮಾರ ಕುಲಕರ್ಣಿ, ಬಿ.ಕೆ. ಕುಲಕರ್ಣಿ, ಶ್ರೀನಿವಾಸ ಹುಲಮನಿ, ಶ್ರೀಕಾಂತ ಪೂಜಾರ, ಡಾ. ಪ್ರಸನ್ನ ಕುಲಕರ್ಣಿ, ಡಿ.ಎಂ. ಪೂಜಾರ ಮಂಜುನಾಥ ಒಂಟಿ, ಪ್ರಾಣೇಶ ಬೆಳ್ಳಟ್ಟಿ, ರಮೇಶ ತೊರಗಲ್, ದೃವ ಬೆಟಗೇರಿ, ರವೀಂದ್ರ ರಾಯಚೂರ, ಗಂಗಾಧರ ಹಳ್ಳಿಕೇರಿ, ಸೇರಿದಂತೆ ನೂರಾರು ಮಹಿಳೆಯರು ಸಹ ಈ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ಮಂಗಳವಾರ ಬೆಳಿಗ್ಗೆಯಿಂದಲೇ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆರಾಧನೆ ಕಾರ್ಯಕ್ರಮ ನೆರವೇರಿತು. ಗುರುವಾರ ವಿವಿಧ ಪುಷ್ಪಗಳಿಂದ ಅಲಂಕರಿಸಿದ ರಾಯರ ವೃಂದಾವನವನ್ನು ಭಕ್ತರು ವೀಕ್ಷಿಸಿ ಕಣ್ತುಂಬಿಕೊಂಡರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!