HomeLife Styleನುಗ್ಗೆ ಸೊಪ್ಪು ತಿನ್ನೋದರಿಂದ ಆಗುವ ಪ್ರಯೋಜನೆ ತಿಳಿದ್ರೆ ಅಶ್ವರ್ಯಪಡುತ್ತೀರಾ!

ನುಗ್ಗೆ ಸೊಪ್ಪು ತಿನ್ನೋದರಿಂದ ಆಗುವ ಪ್ರಯೋಜನೆ ತಿಳಿದ್ರೆ ಅಶ್ವರ್ಯಪಡುತ್ತೀರಾ!

For Dai;y Updates Join Our whatsapp Group

Spread the love

ಭಾರತದ ಉದ್ದಗಲಕ್ಕೆ ನುಗ್ಗೆ ಜನಪ್ರಿಯ. ಆದರೆ ಬೇಸಿಗೆಯಲ್ಲಿ ಇದು ದೇಹದ ಉಷ್ಣತೆ ಹೆಚ್ಚಿಸುತ್ತದೆ ಎಂದು ಇದನ್ನು ದೂರ ಮಾಡಿ, ಮಳೆಗಾಲ-ಚಳಿಗಾಲದಲ್ಲಿ ಮಾತ್ರವೇ ಬಳಸುವ ಕ್ರಮ ಹಲವೆಡೆಗಳಲ್ಲಿದೆ.  ಸಾಮಾನ್ಯವಾಗಿ ನುಗ್ಗೆ ಕಾಯಿಯನ್ನು ಎಲ್ಲರೂ ಬಳಸುತ್ತಾರೆ. ಆದರೆ ನುಗ್ಗೆ ಸೊಪ್ಪಿನ ಪ್ರಯೋಜನಗಳು ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ.

ನುಗ್ಗೆ ಸೊಪ್ಪು ನೈಸರ್ಗಿಕ ರಕ್ತ ಶುದ್ಧಿಕಾರಕವಾಗಿದ್ದು, ರಕ್ತದಲ್ಲಿನ ಕಲ್ಮಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ನುಗ್ಗೆ ಸೊಪ್ಪು ಬಿ-ಕಾಂಪ್ಲೆಕ್ಸ್ ವಿಟಮಿನ್‌ಗಳು, ವಿಟಮಿನ್ ಎ ಮತ್ತು ಇತರ ಅಗತ್ಯ ಪೋಷಕಾಂಶಗಳಿಂದ ತುಂಬಿದೆ. ಇದು ಚರ್ಮದ ಹೊಳಪು ಮತ್ತು ಕೂದಲ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ನುಗ್ಗೆ ಸೊಪ್ಪು ಔಷಧೀಯ ಗುಣಗಳ ಆಗರ. ನುಗ್ಗೆ ಸೊಪ್ಪಿನ ಪ್ರಯೋಜನಗಳನ್ನು ತಿಳಿಯೋಣ

ಹೊಟ್ಟೆಗೆ ಪ್ರಯೋಜನಕಾರಿ: ಅಜೀರ್ಣದ ಸಮಸ್ಯೆಗಳನ್ನು ನಿವಾರಿಸಲು ನುಗ್ಗೆ ಸೊಪ್ಪು ಸಹಕಾರಿ. ಮಲಬದ್ಧತೆ, ಉಬ್ಬರಿಕೆ, ಅನಿಲ, ಜಠರದ ಉರಿತ ಮತ್ತು ಅಲ್ಸರೇಟಿವ್ ಕೊಲೈಟಿಸ್ ಸಮಸ್ಯೆ ಇರುವವರು , ತಮ್ಮ ಆಹಾರದ ನುಗ್ಗೆ ಸೊಪ್ಪನ್ನು ಸೇವಿಸುವುದರಿಂದ ಪ್ರಯೋಜನವಾಗುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ನುಗ್ಗೆ ಸೊಪ್ಪಿನಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪೈಟೋನ್ಯೂಟ್ರಿಯಂಟ್ಸ್ ಅಧಿಕವಾಗಿರುವುದರಿಂದ, ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ ಶಕ್ತಿಯುತವಾಗುತ್ತದೆ ಮತ್ತು ಎಲ್ಲಾ ರೀತಿಯ ಸೋಂಕುಗಳ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ.ಅದರಲ್ಲಿರುವ ವಿಟಮಿನ್ ಎ, ಸಿ ಮತ್ತು ಕಬ್ಬಿಣಾಂಶವೂ ರೋಗ ನಿರೋಧಕ ಸಾಮರ್ಥ್ಯವನ್ನು ವೃದ್ಧಿಸಲು ಸಹಕಾರಿಯಾಗುತ್ತದೆ.

ಮೂಳೆಗಳ ಆರೋಗ್ಯವನ್ನು ಹೆಚ್ಚಿಸುತ್ತದೆ: ನುಗ್ಗೆ ಸೊಪ್ಪು , ಮೂಳೆಗಳ ಆರೋಗ್ಯಕ್ಕೆ ಅತ್ಯಂತ ಲಾಭದಾಯಕವಾಗಿರುವ ಕ್ಯಾಲ್ಸಿಯಂ ಮತ್ತು ಪ್ರಾಸ್ಫರಸ್‍ನ ಖಜಾನೆಯಾಗಿದೆ. ನುಗ್ಗೆ ಸೊಪ್ಪು, ಅರ್ಥರೈಟಿಸ್‍ನಿಂದ ರಕ್ಷಿಸುತ್ತದೆ ಮತ್ತು ಮೂಳೆಗಳನ್ನು ಸದೃಢಗೊಳಿಸುವ ಮೂಲಕ ಆಸ್ಟಿಯೋಪೊರೋಸಿಸ್ ವಿರುದ್ಧ ಹೋರಾಡುತ್ತದೆ.

ಹೃದಯದ ಆರೋಗ್ಯವನ್ನು ಕಾಪಾಡುತ್ತದೆ: ಕೆಟ್ಟ ಕೊಲೆಸ್ಟ್ರಾಲ್‍ಗಳು ರಕ್ತನಾಳಗಳನ್ನು ಬ್ಲಾಕ್​ ಮಾಡಿ, ಹೃದಯಾಘಾತಕ್ಕೆ ಕಾರಣವಾಗಬಹುದು. ನುಗ್ಗೆ ಸೊಪ್ಪು ಹೃದಯವನ್ನು ರಕ್ಷಿಸುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್‍ಮಟ್ಟವನ್ನು ಕಡಿಮೆ ಮಾಡುವ ಮೂಲಕ ರಕ್ತನಾಳದ ವ್ಯವಸ್ಥೆಯ ಸುಗಮ ಕಾರ್ಯನಿರ್ವಣೆಗೆ ಬೆಂಬಲ ನೀಡುತ್ತದೆ.

ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ: ನುಗ್ಗೆ ಸೊಪ್ಪು ರಕ್ತದಲ್ಲಿನ ಗ್ಲೂಕೋಸ್‌ ಪ್ರಮಾಣವನ್ನು ನಿಯಂತ್ರಿಸುತ್ತದೆ, ಅದರಿಂದ ಮಧುಮೇಹದ ಅಪಾಯ ಕಡಿಮೆಯಾಗುತ್ತದೆ. ನುಗ್ಗೆ ಸೊಪ್ಪಿನಲ್ಲಿರುವ ವರ್ಣದ್ರವ್ಯ ಕ್ಲೊರೊಜೆನಿಕ್ ಆಮ್ಲವು ಊಟದ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡುತ್ತದೆ.

ಉರಿಯೂತದ ನಿಯಂತ್ರಣಕ್ಕೆ ಸಹಾಯ: ಉರಿಯೂತ ಎಂದರೆ, ದೇಹ ನೋವು ಮತ್ತು ಗಾಯಗಳಿಗೆ ನೈಸರ್ಗಿಕವಾಗಿ ಹೇಗೆ ಸ್ಪಂದಿಸುತ್ತದೆ ಎಂಬುವುದು. ಆದರೆ ಅದು ಅನಿಯಂತ್ರಿತವಾದರೆ ದೇಹಕ್ಕೆ ಒಳ್ಳೆಯದಲ್ಲ. ನುಗ್ಗೆ ಸೊಪ್ಪು , ಉರಿಯೂತದ ಕಿಣ್ವಗಳನ್ನು ನಿಗ್ರಹಿಸಿ ಮತ್ತು ಆ್ಯಂಟಿ ಇನ್‍ಫ್ಲಮೇಟರಿ ಸೈಟೋಕಿನ್‍ಗಳನ್ನು ಹೆಚ್ಚಿಸುವ ಮೂಲಕ ದೇಹದ ಉರಿಯೂತವನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!