ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ದನ ಮೇಯಿಸಲು ಹೋಗಿ ಇಬ್ಬರು ಬಾಲಕರು ಹಳ್ಳದಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ. ಓರ್ವನ ಶವ ಪತ್ತೆಯಾಗಿದ್ದು, ಇನ್ನೋರ್ವನಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಮೃತ ಬಾಲಕನನ್ನು ಶಂಕರ ಮೇಟಿ (10) ಎಂದು ಗುರುತಿಸಲಾಗಿದ್ದು, ಶ್ರೀಯಣ್ಣ ಚಂದ್ರಕಾಂತ್‌ಗಾಗಿ (8) ಹುಡುಕಾಟ ನಡೆಸುತ್ತಿದ್ದಾರೆ.
Advertisement
ಭಾನುವಾರ ಸ್ಕೂಲ್‌ಗೆ ರಜೆಯಿದ್ದ ಹಿನ್ನೆಲೆ ಇಬ್ಬರು ಬಾಲಕರು ದನ ಮೇಯಿಸಲು ತೆರಳಿದ್ದರು. ಆ ವೇಳೆ ಕಾಲು ಜಾರಿ ಹಿರೇಹಳ್ಳಕ್ಕೆ ಬಿದ್ದಿದ್ದಾರೆ. ನಿನ್ನೆ (ನ.18) ತಡರಾತ್ರಿಯಿಂದ ಸ್ಥಳದಲ್ಲಿ ಅಗ್ನಿಶಾಮಕ, ಪೊಲೀಸ್ ಸಿಬ್ಬಂದಿ ಬಿಡುಬಿಟ್ಟಿದೆ. ಸದ್ಯ ಶಂಕರನ ಶವ ಪತ್ತೆಯಾಗಿದ್ದು, ಶ್ರೀಯಣ್ಣಗಾಗಿ ಶೋಧ ಕಾರ್ಯ ಮುಂದುವರೆದಿದೆ. ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.