ಬಾಗಲಕೋಟೆ: ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ನೀಡಿದ್ದ ಸಿಎಂ ಹೇಳಿಕೆ ಸಂಬಂಧ ಸಚಿವ ಆರ್.ಬಿ ತಿಮ್ಮಾಪುರ್ ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, “ನಾನು ಸ್ಪಷ್ಟವಾಗಿ ಹೇಳುತ್ತೇನೆ, ಯತೀಂದ್ರ ಸಾಹೇಬರ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಮುಖ್ಯಮಂತ್ರಿ ಆಯ್ಕೆಯು ಸಿಎಲ್.ಪಿ ಹಾಗೂ ಎಐಸಿಸಿ ನಾಯಕರ ನಿರ್ಧಾರವಾಗಬೇಕು. ಅವರ ಅಭಿಪ್ರಾಯವನ್ನು ನಾನು ಹಂಚಿಕೊಳ್ಳಲು ಸಾಧ್ಯವಿಲ್ಲ.”
ಸಿಎಂ ಕನಸು ಕಾಣುತ್ತಿರುವ ಡಿಕೆಶಿ ಕುರಿತು, ಮಾತನಾಡಿ, ಯಾರ್ಯಾರು ಮುಖ್ಯಮಂತ್ರಿಯಾಗಬೇಕು ಎಂಬುದನ್ನು ಯಾರಾದರೂ ಕೇಳಬಾರದು. ಮುಂದಿನ ಮುಖ್ಯಮಂತ್ರಿಯನ್ನು ಸಿಎಲ್.ಪಿನಲ್ಲಿ ಪಾಸಾಗಬೇಕು ಮತ್ತು ಎಐಸಿಸಿ ನಾಯಕರು ಆಶೀರ್ವಾದ ನೀಡಬೇಕು.”
“ಸತೀಶ್ ಜಾರಕಿಹೊಳಿ ನಾಯಕತ್ವ ಗುಣ ಹೊಂದಿದ್ದಾರೆ, ಎಲ್ಲ ಜಾತಿ-ಜನಾಂಗದವರನ್ನು ಒಟ್ಟುಗೂಡಿಸಿಕೊಳ್ಳುವ ಸಾಮರ್ಥ್ಯ ಇವರಲ್ಲಿದೆ. ನಾನು ಹೇಳಿದ್ದು, ಸತೀಶ್ ಅವರಿಗೆ ಈ ಶಕ್ತಿ ಇದೆ ಎಂಬುದು ಮಾತ್ರ, ‘ಈ ಪರೇಡ್‌ನಲ್ಲಿ ಆಗ್ತಾರೆ’ ಎಂದು ನಾನು ಹೇಳಿಲ್ಲ ಎಂದರು.