ಬೆಂಗಳೂರು:- ಯತ್ನಾಳ್ ಹಿರಿಯರು, ಅವರು ಯಾವ ಭಾಷೆಯಲ್ಲಿ ಮಾತನಾಡಿದ್ರೂ ತಲೆ ಕೆಡಿಸಿಕೊಳ್ಳಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.
Advertisement
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಯತ್ನಾಳ್ ಏನೇನು ಮಾತನಾಡುತ್ತಿದ್ದಾರೋ ಅದನ್ನು ಪಟ್ಟಿ ಮಾಡಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲದ್ದಕ್ಕೂ ಒಂದೇ ಬಾರೀ ಉತ್ತರ ಕೊಡುತ್ತೇನೆ ಎಂದರು.
ಈಗ ಪಕ್ಷದಲ್ಲಿ ಕೆಲಸ ಇದೆ. ಪ್ರತಿ ದಿನ ಇದರ ಬಗ್ಗೆಯೇ ಮಾತನಾಡಲು ಆಗಲ್ಲ. ನನ್ನ ಬಗ್ಗೆ ಮಾತನಾಡಿದರೆ ನಾನೇ ಉತ್ತರ ಕೊಡುತ್ತೇನೆ ಎಂದರು. ಬಸನಗೌಡ ಪಾಟೀಲ್ ಯತ್ನಾಳ್ ಏಕವಚನ ಬಳಕೆ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಅವರು, ಯತ್ನಾಳ್ ಹಿರಿಯರು ಇದ್ದಾರೆ. ಏಕವಚನದಲ್ಲಿ ಮಾತನಾಡಿದ್ದಾರೋ, ಇನ್ನೊಂದು ಭಾಷೆಯಲ್ಲಿ ಮಾತನಾಡಿದ್ದಾರೋ ತಲೆ ಕೆಡಿಸಿಕೊಳ್ಳಲ್ಲ. ನಮಗೆ ಪಕ್ಷದಲ್ಲಿ ಕೆಲಸ ಮಾಡಲು ಸಾಕಷ್ಟು ಇದೆ ಎಂದು ಹೇಳಿದರು.