ಮಂಗಳೂರು: ಬಸ್ನಲ್ಲಿ ಕಂಡಕ್ಟರ್ನಿಂದ ಯುವತಿಗೆ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಆರೋಪಿ ಕಂಡಕ್ಟರ್‌ನನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಕಂಡಕ್ಟರ್ ಪ್ರದೀಪ್ ಕಾಶಪ್ಪ ನಾಯ್ಕರ್ ಆರೋಪಿಯಾಗಿದ್ದು,
Advertisement
ಮುಡಿಪುವಿನಿಂದ ಸ್ಟೇಟ್ ಬ್ಯಾಂಕ್ನತ್ತ ತೆರಳುತ್ತಿದ್ದ ಬಸ್ನಲ್ಲಿ ಯುವತಿ ನಿದ್ರೆಗೆ ಜಾರಿದ್ದರು. ಆ ಸಂದರ್ಭದಲ್ಲಿ ಕಂಡಕ್ಟರ್ ಆ ಯುವತಿಗೆ ಕಿರುಕುಳ ನೀಡಿದ್ದಾನೆ.
ಇದನ್ನು ಪ್ರಯಾಣಿಕರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಬಳಿಕ ಮಂಗಳೂರು ಕೆಎಸ್ಆರ್‌ಟಿಸಿ ಡಿಸಿ ರಾಜೇಶ್ ಶೆಟ್ಟಿ ಅವರು ಬಸ್ ಕಂಡಕ್ಟರ್ ಪ್ರದೀಪ್‌ನನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.