ಯುವಕರು ದುಶ್ಚಟಗಳಿಂದ ದೂರವಿರಿ: ಜಿ.ಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ತಂದೆ-ತಾಯಿಯರು ಮಕ್ಕಳಿಗೆ ಉತ್ತಮ ಸಂಸ್ಕಾರ, ಶಿಕ್ಷಣ ನೀಡುವ ಮೂಲಕ ಮಕ್ಕಳನ್ನು ಉತ್ತಮ ನಾಗರಿಕನನ್ನಾಗಿ ಮಾಡುವ ಗುರುತರ ಜವಾಬ್ದಾರಿಯನ್ನು ಮರೆಯಬಾರದೆಂದು ಎಂದು ಜಿ.ಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ ಹೇಳಿದರು.

Advertisement

ಅವರು ಗದಗ ತಾಲೂಕಿನ ಅಡವಿಸೋಮಾಪೂರ ಗ್ರಾಮದಲ್ಲಿ ಜರುಗಿದ ದಾಸಶ್ರೇಷ್ಠ ಭಕ್ತ ಕನಕದಾಸರ ೫೩೭ನೇ ಜಯಂತ್ಯುತ್ಸವ ಹಾಗೂ ಬೀರಲಿಂಗೇಶ್ವರ ದೇವಸ್ಥಾನದ ಕಾರ್ತಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಇದರ ನಡುವೆ ಬದಕಿನಲ್ಲಿ ಮಾಡುವ ಪ್ರತಿಯೊಂದು ಉತ್ತಮ ಕೆಲಸ-ಕಾರ್ಯಗಳು ಬಹಳ ಮುಖ್ಯವಾದುದು. ಯುವ ಜನತೆ ದುಶ್ಚಚಟಗಳಿಂದ ದೂರ ಉಳಿದು ದೀರ್ಘಾಯುಷಿಗಳಾಗಬೇಕು. ಶಹರಗಳಿಂತ ಹಳ್ಳಿಗಳಲ್ಲಿ ಹಿರಿಯರನ್ನು ಗೌರವದಿಂದ ಕಾಣುವುದು ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದ ಅವರು, ಹಿರಿಯರ ಮಾತುಗಳನ್ನು ಪಾಲಿಸಿ, ಗೌರವದಿಂದ ನಡೆದುಕೊಳ್ಳುವುದನ್ನು ಕಲಿಯುವ ಜೊತೆಗೆ ಆರ್ಥಿಕವಾಗಿ ಸಬಲರಾಗಿ, ಸುಧಾರಣೆಯತ್ತ ಸಾಗಲು ಯುವ ಜನತೆಗೆ ತಿಳಿಸಿದರು.

ಹಾಲುಮತ ಮಹಾಸಭಾದ ರಾಜಾಧ್ಯಕ್ಷ ರುದ್ರಣ್ಣ ಗುಳಗುಳಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗ್ರಾಮಸ್ಥರನ್ನು ಸನ್ಮಾನಿಸಿ ಮಾತನಾಡಿ, ಕಾರ್ತಿಕ ಮಾಸದಲ್ಲಿ ಸಾಮೂಹಿಕವಾಗಿ ದೀಪ ಹಚ್ಚುವ ಮಹತ್ವವನ್ನು ತಿಳಿಸಿ, ನಾಡಿನ ಪರಂಪರೆ ಮರೆಯದೆ ದಾಸರು, ಶರಣರು, ಸಂತರು ನೀಡಿದ ಮಾರ್ಗದರ್ಶನಲ್ಲಿ ಸಾಗಬೇಕು ಎಂದರು.

ಕಾಂಗ್ರೆಸ್ ಯುವ ಮುಖಂಡ ಪ್ರಕಾಶ ಕರಿ, ತಾ.ಪಂ ಮಾಜಿ ಸದಸ್ಯ ಪ್ರಹ್ಲಾದ ಹೊಸಳ್ಳಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಗ್ರಾ.ಪಂ ಅಧ್ಯಕ್ಷೆ ಕೀರ್ತಿ ಪಾಟೀಲ, ಆನಂದಪ್ಪ ಪುರದ, ಈರಪ್ಪ ಹೊಸಳ್ಳಿ, ಅರುಣ ಅಣ್ಣಿಗೇರಿ, ಈರಪ್ಪ ದೊಡ್ಡಮನಿ, ಕಾಶೀಮಸಾಬ ಹರಿವಾಣ, ಜಮಾಲಸಾಬ ಬೇಲೇರಿ, ಮಂಜುನಾಥ ಜಡಿ, ಬಾಳಪ್ಪ ಕೊಪ್ಪದ, ಜನಪದ ಕಲಾವಿದ ಹನಮಂತ ಬಟ್ಟೂರ, ಹೇಮಂತ ಎಸ್.ಜಿ, ಕುಮಾರ ಮಾರನಬಸರಿ, ಅಚ್ಚು, ಪ್ರವೀಣ, ಸಚ್ಚಿನ, ಸುನೀಲ, ರವಿ ಹುಡೇದ, ಬಸಣ್ಣ ಕರಬಿಷ್ಠಿ ಸೇರಿದಂತೆ ಗ್ರಾಮದ ಹಿರಿಯರು, ಯುವ ಮುಖಂಡರು ಉಪಸ್ಥಿತರಿದ್ದರು.

ಸಮಾರಂಭಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಡೊಳ್ಳಿನ ಮೇಳದೊಂದಿಗೆ ದಾಸಶೇಷ್ಠ ಭಕ್ತ ಕನಕದಾಸರ ಭಾವಚಿತ್ರ ಮೆರವಣಿಗೆಯ ಜರುಗಿತು. ಮೆರವಣಿಗೆಗೆ ಮಾಜಿ ಶಾಸಕ ಬಿ.ಆರ್. ಯಾವಗಲ್ ಚಾಲನೆ ನೀಡಿದರು. ಸ್ಥಳೀಯ ಶ್ರೀ ಸಿದ್ದಲಿಂಗೇಶ್ವರ ಕಲಾ ತಂಡದಿAದ ಸಾಂಸ್ಕೃತಿಕ ಕಾರ್ಯಕ್ರಮ, ಲಂಬಾಣಿ ನೃತ್ಯ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು.

ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಕುರುಬರ ಸಂಘದ ಜಿಲ್ಲಾಧ್ಯಕ್ಷ ಫಕ್ಕೀರಪ್ಪ ಹೆಬಸೂರ, ಉತ್ತಮ ಸಮಾಜವನ್ನು ನಿರ್ಮಾಣ ಮಾಡುವದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸಗಳನ್ನು ಮಾಡಬೇಕು. ಇಂತಹ ಕಾರ್ಯಕ್ರಮಗಳನ್ನು ಅತ್ಯಂತ ಅಚ್ಚುಕಟ್ಟಾಗಿ ನಿಭಾಯಿಸಬೇಕೆಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here