HomeGadag Newsಸಚಿವ ಎಚ್.ಕೆ. ಪಾಟೀಲರಿಗೆ ಯುವರಾಜ ಬಳ್ಳಾರಿ ಮನವಿ

ಸಚಿವ ಎಚ್.ಕೆ. ಪಾಟೀಲರಿಗೆ ಯುವರಾಜ ಬಳ್ಳಾರಿ ಮನವಿ

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಮ್‌ರವರ 117ನೇ ಜಯಂತಿ ಅಂಗವಾಗಿ ಗದಗ ನಗರದ ಸರ್ಕಲ್‌ವೊಂದರಲ್ಲಿ ಡಾ. ಬಾಬು ಜಗಜೀವನರಾಮ್‌ರವರ ಪುತ್ಥಳಿ ಸ್ಥಾಪಿಸಿ ನಾಮಕರಣ ಮಾಡುವಂತೆ ಡಾ. ಬಾಬಾಸಾಹೇಬ ಅಂಬೇಡ್ಕರ ಹಾಗೂ ಡಾ. ಜಗಜೀವನರಾಮ ಸಮಾನತೆ ಸಮಿತಿ ಗದಗ ಸಂಚಾಲಕ ಯುವರಾಜ ಬಳ್ಳಾರಿಯವರು ಕಾನೂನು, ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ಯುವರಾಜ ಬಳ್ಳಾರಿ, ಭಾರತದ ಉಪಪ್ರಧಾನಿಯಾಗಿ, ದಲಿತರ ಧ್ವನಿಯಾಗಿ, ದೇಶದಲ್ಲಿ ಹಸಿರು ಕ್ರಾಂತಿಯ ಹರಿಕಾರ ಎಂಬ ಹೆಸರನ್ನು ಡಾ. ಬಾಬು ಜಗಜೀವನರಾಮರು ಗಳಿಸಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರಾಗಿದ್ದಾಗ ಹಿಂದಿನ ಸರ್ಕಾರದಲ್ಲಿ ಗದಗ-ಬೆಟಗೇರಿ ನಗರದ ವಾರ್ಡ್ ನಂ. 16ರಲ್ಲಿ ನಗರಸಭೆ ಸದಸ್ಯರಾದ ಕೃಷ್ಣಾ ಪರಾಪೂರರ ಮನವಿಯ ಮೇರೆಗೆ ಡಾ. ಬಾಬು ಜಗಜೀವನರಾಮ್ ಇವರ ಹೆಸರಿನಲ್ಲಿ ಸಮುದಾಯ ಭವನ ನಿರ್ಮಾಣ ಮಾಡಿದ್ದಾರೆ.

ಇದೇ ತಿಂಗಳು 5ರಂದು ಡಾ. ಬಾಬು ಜಗಜೀವನರಾಮ ಇವರ ಜಯಂತಿಯಿದ್ದು, ಈ ದಿನದಂದು ಅವರ ಭಾವಚಿತ್ರವನ್ನು ಇಟ್ಟು ಅವರ ಜಯಂತಿ ಆಚರಿಸುತ್ತಾ ಬಂದಿದ್ದೇವೆ. ಇಂತಹ ಮಹಾನ್ ವ್ಯಕ್ತಿಯ ಹೆಸರಿನಲ್ಲಿ ಗದಗ-ಬೆಟಗೇರಿ ನಗರದ ಪ್ರಮುಖ ಸರ್ಕಲ್‌ವೊಂದರಲ್ಲಿ ಪುತ್ಥಳಿ ನಿರ್ಮಾಣ ಮಾಡಿ ಡಾ. ಬಾಬು ಜಗಜೀವನರಾಮ್ ಸರ್ಕಲ್ ಎಂದು ನಾಮಕರಣ ಮಾಡಬೇಕೆಂದು ವಿನಂತಿಸಿಕೊಂಡರು.

ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಎಸ್.ಎನ್. ಬಳ್ಳಾರಿ, ಬಾಲರಾಜ ಅರಬರ, ಗೋವಿಂದರಾಜ ಬಳ್ಳಾರಿ, ಸಯ್ಯದಖಾಲಿದ ಕೊಪ್ಪಳ, ಮಾರುತಿ ಗುಡಿಮನಿ, ಮಹೇಶ ನಾನ್‌ಬಲ್, ಸುಂಕಪ್ಪ ಗುತ್ತಿ, ನಾಗರಜ ಕಿನ್ನಾರ ಉಪಸ್ಥಿತರಿದ್ದರು.

ಮನವಿ ಸ್ವೀಕರಿಸಿದ ಸಚಿವ ಡಾ. ಎಚ್.ಕೆ. ಪಾಟೀಲ, ಮುಂಬರುವ ದಿನಮಾನಗಳಲ್ಲಿ ಡಾ. ಬಾಬು ಜಗಜೀವನರಾಮ್ ಅವರ ಪುತ್ಥಳಿಯನ್ನು ನಗರದ ಪ್ರಮುಖ ಸರ್ಕಲ್‌ನಲ್ಲಿ ಸ್ಥಾಪಿಸಿ, ಅವರ ಹೆಸರನ್ನು ನಾಮಕರಣ ಮಾಡುವುದಾಗಿ ಭರವಸೆ ನೀಡಿದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!