ಮೋಷನ್ ಪೋಸ್ಟರ್ ನಲ್ಲಿ ‘ಜೀಬ್ರಾ’…ದೀಪಾವಳಿಗೆ ತೆರೆಗೆ ಬರ್ತಿದೆ ಡಾಲಿ ಧನಂಜಯ್-ಸತ್ಯ ದೇವ್ ಸಿನಿಮಾ

0
Spread the love

ನಟರಾಕ್ಷಸ ಡಾಲಿ ಧನಂಜಯ್ ಹಾಗೂ ತೆಲುಗಿನ ಪ್ರತಿಭಾನ್ವಿತ ನಾಯಕ ಸತ್ಯದೇವ್ ನಟನೆಯ ಬಹುನಿರೀಕ್ಷಿತ ಮಲ್ಟಿಸ್ಟಾರ್ ಸಿನಿಮಾ ಜೀಬ್ರಾ. ಫಸ್ಟ್ ಲುಕ್ ಮೂಲಕ ಗಮನಸೆಳೆದಿದ್ದ ಜೀಬ್ರಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಮೋಷನ್ ಪೋಸ್ಟರ್ ನಲ್ಲಿ ಸತ್ಯರಾಜ್, ಸತ್ಯ ಅಕ್ಕಲಾ, ಜೆನ್ನಿಫರ್ ಪಿಕ್ಕಿನಾಟೊ, ಸುನಿಲ್, ಪ್ರಿಯಾ ಭವಾನಿ ಶಂಕರ್, ಡಾಲಿ ಧನಂಜಯ್ ಮತ್ತು ಸತ್ಯ ದೇವ್ ಅವರನ್ನು ಪರಿಚಯಿಸಲಾಗಿದೆ.

Advertisement

ಮೋಷನ್ ಪೋಸ್ಟರ್ ನಲ್ಲಿ ಚೆಸ್ ಆಟ, ಕಾಯಿನ್ ಫ್ಲಿಪ್ಪಿಂಗ್, ಕರೆನ್ಸಿ ನೋಟುಗಳು ಮತ್ತು ಫ್ಲೈಓವರ್ ನಿಂದ ಕಾರ್ ಇಳಿಯುವ ದೃಶ್ಯಗಳು ಆಕರ್ಷಕವಾಗಿವೆ. ಬಹಳ ಕ್ರಿಯೇಟಿವಿಟಿಯಾಗಿ ಮೋಷನ್ ಪೋಸ್ಟರ್ ನ್ನು ಚಿತ್ರೀಕರಿಸಲಾಗಿದೆ. ಜೀಬ್ರಾ ಸಿನಿಮಾವನ್ನ ಈಶ್ವರ್ ಕಾರ್ತಿಕ್ ಡೈರೆಕ್ಷನ್ ಮಾಡಿದ್ದಾರೆ. ಕ್ರೈಂ ಮತ್ತು ಥ್ರಿಲ್ಲರ್ ಕಂಟೆಂಟ್ ಇರೋ ಚಿತ್ರ ಇದಾಗಿದೆ.

ಪದ್ಮಜಾ ಫಿಲಂಸ್ ಪ್ರೈವೇಟ್ ಲಿಮಿಟೆಡ್ ಮತ್ತು ಓಲ್ಡ್ ಟೌನ್ ಪಿಕ್ಚರ್ಸ್ ಬ್ಯಾನರ್‌ಗಳ ಅಡಿಯಲ್ಲಿ ಎಸ್‌ಎನ್ ರೆಡ್ಡಿ, ಎಸ್ ಪದ್ಮಜಾ, ಬಾಲ ಸುಂದರಂ ಮತ್ತು ದಿನೇಶ್ ಸುಂದರಂ ನಿರ್ಮಾಣ ಮಾಡಲಾಗಿದೆ. ಕೆಜಿಎಫ್ ಮತ್ತು ಸಲಾರ್ ಖ್ಯಾತಿಯ ರವಿ ಬಸ್ರೂರ್ ಚಿತ್ರಕ್ಕೆ ಸಂಗೀತ ನೀಡಿದ್ದು, ಸತ್ಯ ಪೊನ್ಮಾರ್ ಅವರ ಛಾಯಾಗ್ರಹಣವಿದೆ. ಎಸ್ ಶ್ರೀಲಕ್ಷ್ಮಿ ರೆಡ್ಡಿ ಸಹ ನಿರ್ಮಾಪಕಿ. ಅನಿಲ್ ಕ್ರಿಶ್ ಸಂಕಲನ,ಮೀರಾಖ್ ಸಂಭಾಷಣೆ ಇದೆ. ಅಶ್ವಿನಿ ಮುಲ್ಪುರಿ, ಗಂಗಾಧರ ಬೊಮ್ಮರಾಜು ಕಾಸ್ಟ್ಯೂಮ್ ಡಿಸೈನರ್ ಆಗಿ ದುಡಿದಿದ್ದಾರೆ. ಮೋಷನ್ ಪೋಸ್ಟರ್ ಜೊತೆಗೆ ಚಿತ್ರತಂಡ ಬಿಡುಗಡೆ ದಿನಾಂಕ ಕೂಡ ಘೋಷಣೆ ಮಾಡಿದೆ. ಬೆಳಕಿನ ಹಬ್ಬ ದೀಪಾವಳಿಗೆ ಜೀಬ್ರಾ ತೆರೆಗೆ ಬರಲಿದೆ.


Spread the love

LEAVE A REPLY

Please enter your comment!
Please enter your name here