ವಿಜಯಸಾಕ್ಷಿ ಸುದ್ದಿ, ಮೈಸೂರು
Advertisement
ಮುಂದಿನ ಅಧಿವೇಶನದಲ್ಲಿ ಎಲ್ಲರೂ ಪ್ರಮಾಣ ಮಾಡಬೇಕು.
ನಾವು ಮುಂದೆ ಆ ರೀತಿ ನಡೆದುಕೊಳ್ಳುವುದಿಲ್ಲ ಎಂದು ಪ್ರಮಾಣ ಮಾಡಿ ಸದನ ಶುರು ಮಾಡಬೇಕು ಎಂದು ಹಿರಿಯ ಪರಿಷತ್ ಸದಸ್ಯ ಅಲ್ಲಂ ವೀರಭದ್ರಪ್ಪ
ವಿಧಾನ ಪರಿಷತ್ನ ಗದ್ದಲ ವಿಚಾರವಾಗಿ ಹೀಗೆ ಹೇಳಿದರು.
ಮೈಸೂರಿನಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಅಂದು ನಡೆದದ್ದು ಗದ್ದಲವಲ್ಲ, ದುರ್ಘಟನೆ ಎಂದು ವಿಷಾದ ವ್ಯಕ್ತಪಡಿಸಿದರು.
ಪರಿಷತ್ ಬೇಕೊ ಬೇಡವೋ ಎಂಬ ಚರ್ಚೆಯ ಬಗ್ಗೆ ಪ್ರತಿಕ್ರಿಯಿಸಿದ ವೀರಭದ್ರಪ್ಪ, ಪರಿಷತ್ ರದ್ದು ಮಾಡೋದು ಬಿಡೋದು ಸರ್ಕಾರಕ್ಕೆ ಬಿಟ್ಟ ವಿಚಾರ. ವಿಧಾನಸಭೆಗಿಂತ ವಿಧಾನ ಪರಿಷತ್ನಲ್ಲಿ ಹೆಚ್ಚು ಚರ್ಚೆ ಆಗುತ್ತಿತ್ತು. ನಾನು ಈ ಹಿಂದೆ ಸಚಿವನಾಗಿದ್ದ ವೇಳೆ ಪರಿಷತ್ ಸದಸ್ಯರ ಪ್ರಶ್ನೆಗಳಿಗೆ ಭಯ ಬೀಳುತ್ತಿದ್ದೆ.
ಹಾಗಾಗಿಯೇ ಪರಿಷತ್ತನ್ನ ಬುದ್ದಿಜೀವಿಗಳು, ಹಿರಿಯರ ಮನೆ ಅಂತಿದ್ರು, ಈಗ ಆ ರೀತಿ ಇಲ್ಲ ಎಂದು ಅಸಮಾಧಾನ ಪಟ್ಟರು.