ಸರಳ ವಿವಾಹ ಉತ್ತಮ ನಿರ್ಧಾರ

0
dambal
Spread the love

ವಿಜಯಸಾಕ್ಷಿ ಸುದ್ದಿ, ಡಂಬಳ : ಸಾಲ ಮಾಡಿ ಮದುವೆ ಮಾಡಿಕೊಳ್ಳುವುದಕ್ಕಿಂತ, ಹಣ ಉಳಿತಾಯದ ಜೊತೆಗೆ ಸರಳ- ಸಾಮೂಹಿಕ ಮದುವೆ ಮಾಡಿಕೊಳ್ಳುವುದು ಉತ್ತಮ ನಿರ್ಧಾರ ಎಂದು ವಿರಪಾಪುರದ ಗುರು ಮುದಕೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

Advertisement

ಡಂಬಳ ಹೋಬಳಿಯ ಪೇಠಾ ಆಲೂರ ಗ್ರಾಮದ ಶ್ರೀ ಹಾಲೇಶ್ವರ 46ನೇ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಇಂತಹ ದುಬಾರಿ ಸಮಯದಲ್ಲಿ ಮನೆ ಕಟ್ಟುವುದು ಮತ್ತು ಮದುವೆ ಮಾಡುವುದು ಬಹಳ ಕಷ್ಟದ ಕೆಲಸ. ಜೊತೆಗೆ ಆರ್ಥಿಕ ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ. ಇದನ್ನು ಮನಗಂಡು ತ್ರಿವಿಧ ದಾಸೋಹಿ ಹಾಲೇಶ್ವರ ಶಿವಶರಣರು ಪ್ರತಿ ವರ್ಷ ಬಡವರಿಗಾಗಿ 450ಕ್ಕೂ ಹೆಚ್ಚು ಜೋಡಿಗಳಿಗೆ ಮದುವೆ ಮಾಡಿಸಿದ್ದು ಪ್ರಶಂಸನೀಯ ಎಂದು ಹೇಳಿದರು.

ತ್ರಿವಿಧ ದಾಸೋಹಿ ಹಾಲೇಶ್ವರ ಶಿವಶರಣರು ಮಾತನಾಡಿ, ಸಾಮೂಹಿಕ ಮದುವೆ ಮೂಲಕ ಗುರು-ಹಿರಿಯರ, ಮಠಾದೀಶರ ಆಶೀರ್ವಾದಕ್ಕೆ ಭಾಜನರಾದ ನೀವೇ ಧನ್ಯರು. ನಿಮ್ಮ ನವ ದಾಂಪತ್ಯ ಜೀವನ ಸುಖಕರವಾಗಲಿ ಎಂದು ಹಾರೈಸಿದರಲ್ಲದೆ, ದಾಂಪತ್ಯ ಜೀವನದಲ್ಲಿ ಕೋಪ ಮತ್ತು ದುಡುಕಿನ ನಿರ್ಧಾರಗಳನ್ನು ಬದಿಗಿಟ್ಟು ಕಷ್ಟ-ಸುಖಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಸೊಸೆಯನ್ನು ನಿಮ್ಮ ಮನೆಯ ಮಗಳಂತೆ ಕಂಡರೆ ನಿಮ್ಮ ಮನೆ ಅನೋನ್ಯತೆಯ ಕೇಂದ್ರವಾಗಿರುತ್ತದೆ ಎಂದು ಕಿವಿಮಾತನ್ನು ಹೇಳಿದರು.

ಈ ಸಂದರ್ಭದಲ್ಲಿ 8 ಜೋಡಿಗಳು ಕಂಕಣ ಭಾಗ್ಯ ಪಡೆದರು. ಈರಮ್ಮ ಬ್ಯಾಲಿಹಾಳ ಕುಟುಂಬದವರಿಂದ ಅನ್ನಸಂತರ್ಪಣೆ ಜರುಗಿತು. ಕಾರ್ಯಕ್ರಮದಲ್ಲಿ ಹಾಲೇಶ್ವರ ಮಠದ ಕಾರ್ಯದರ್ಶಿ ವೇ.ಮೂ ಪಂಚಾಕ್ಷರಯ್ಯ ಹಿರೇಮಠ, ವೇ.ಮೂ. ಮಲ್ಲಯ್ಯ ಹಿರೇಮಠ, ಈರಮ್ಮ ಬ್ಯಾಲಿಹಾಳ, ಚಂದ್ರು ನಾಗರಡ್ಡಿ, ನಾಗಪ್ಪ ಚಿಕರಡ್ಡಿ, ವೀರನಗೌಡ ಸುಳ್ಳದ, ಶರಣಪ್ಪ ಬೂತರಡ್ಡಿ, ರವಿ ಚಾಕಲಬ್ಬಿ, ಹಾಲೇಶ ಸೂಡಿ, ಶರಣಪ್ಪ ಪರಡ್ಡಿ, ಮುನಿಯಪ್ಪ ಯು, ಹಾಲೇಶ್ವರ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು, ಗುರುವೃಂದದವರು, ಗ್ರಾಮಸ್ಥರು ಇದ್ದರು.


Spread the love

LEAVE A REPLY

Please enter your comment!
Please enter your name here