ಬೆಂಗಳೂರು: ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿಸಿದರೆ ಹೆಚ್ಚಿನ ಲಾಭ ಕೊಡಿಸುವುದಾಗಿ ನಂಬಿಸಿ ಬರೋಬ್ಬರಿ 93 ಲಕ್ಷ ರೂ. ವಂಚನೆ ಮಾಡಿದ್ದ ಮೂವರು ಅಂತಾರಾಜ್ಯ ಸೈಬರ್ ವಂಚಕರನ್ನು ಸೈಬರ್ ಕಮಾಂಡ್ ಪೊಲೀಸರು ಬಂಧಿಸಿದ್ದಾರೆ.
ಜಾರ್ಖಂಡ್ ಮೂಲದ ಅಮಿತ್ ಮಿಶ್ರಾ ಹಾಗೂ ಬೆಂಗಳೂರಿನ ತೌಸಿಫ್ ಅಹ್ಮದ್ ಮತ್ತು ಪರಶುರಾಮ್ ಬಂಧಿತ ಆರೋಪಿಗಳು. ಹರೀಶ್ ಎಂಬುವವರಿಗೆ ಟ್ರೇಡಿಂಗ್ ಹೆಸರಿನಲ್ಲಿ ನಂಬಿಸಿ 93 ಲಕ್ಷ ರೂ. ವಂಚಿಸಿರುವ ಆರೋಪದಡಿ ಪ್ರಕರಣ ದಾಖಲಾಗಿದೆ.
ಡೊನೇಷನ್ ನೀಡುವುದಾಗಿ ನಂಬಿಸಿ ಬ್ಯಾಂಕ್ ಖಾತೆಗಳನ್ನು ಪಡೆದುಕೊಂಡು, ಬಳಿಕ ನಕಲಿ ಎಪಿಕೆ ಫೈಲ್‌ಗಳ ಮೂಲಕ ಹಣವನ್ನು ಮ್ಯೂಲ್ ಖಾತೆಗಳಿಗೆ ವರ್ಗಾಯಿಸಿ ಹಣ ಡ್ರಾ ಮಾಡಿಕೊಳ್ಳುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಬಂಧಿತರಿಂದ 6 ಮೊಬೈಲ್ ಫೋನ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಮೊಬೈಲ್‌ಗಳ ಪರಿಶೀಲನೆ ವೇಳೆ ಸುಮಾರು 507 ಮ್ಯೂಲ್ ಖಾತೆಗಳ ವಿವರಗಳು ಹಾಗೂ ವಂಚನೆಗೆ ಬಳಸುತ್ತಿದ್ದ 51 ಎಪಿಕೆ ಫೈಲ್‌ಗಳು ಪತ್ತೆಯಾಗಿವೆ.

