• About
  • Advertise
  • Privacy & Policy
  • Contact
Friday, November 6, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Karnataka News

ಪೆಟ್ರೋಲ್ ನಲ್ಲಿ ಶೇ.31.02ರಷ್ಟು ಎಥೆನಾಲ್ ಪತ್ತೆಯಾಗಿದೆ: ರಿಜ್ವಾನ್ ಅರ್ಷದ್ ಗಂಭೀರ ಆರೋಪ

Vijaya Sakshi News Desk by Vijaya Sakshi News Desk
November 6, 2026
in Karnataka News
ಪೆಟ್ರೋಲ್ ನಲ್ಲಿ ಶೇ.31.02ರಷ್ಟು ಎಥೆನಾಲ್ ಪತ್ತೆಯಾಗಿದೆ: ರಿಜ್ವಾನ್ ಅರ್ಷದ್ ಗಂಭೀರ ಆರೋಪ
0
SHARES
1
VIEWS
Share on Facebook

ಬೆಂಗಳೂರು: ರಾಜ್ಯದ ಪೆಟ್ರೋಲ್ ಬಂಕ್‌ಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಿತ ಪೆಟ್ರೋಲ್ ಮಾರಾಟವಾಗುತ್ತಿದೆ ಎಂದು ರಿಜ್ವಾನ್ ಅರ್ಷದ್ ಗಂಭೀರ ಆರೋಪ ಮಾಡಿದ್ದಾರೆ. ಕೆಲವು ಪೆಟ್ರೋಲ್ ಮಾದರಿಗಳಲ್ಲಿ ಶೇ.31.02ರಷ್ಟು ಎಥೆನಾಲ್ ಪತ್ತೆಯಾಗಿದೆ ಎಂದು ಹೇಳಿರುವ ಅವರು, ಪ್ರಯೋಗಾಲಯ ಪರೀಕ್ಷಾ ವರದಿಗಳನ್ನು ಬಹಿರಂಗಪಡಿಸಿ ಕೇಂದ್ರ ಸರ್ಕಾರ ಹಾಗೂ ತೈಲ ಕಂಪನಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಿಜ್ವಾನ್ ಅರ್ಷದ್, ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣದ ಕುರಿತು ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇಂಧನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದರು.

63 ಪೆಟ್ರೋಲ್ ಮಾದರಿಗಳ ಸಂಗ್ರಹ, 5ರಲ್ಲಿ ಹೆಚ್ಚುವರಿ ಎಥೆನಾಲ್!

ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣದ ಕುರಿತು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾದ ಹಿನ್ನೆಲೆಯಲ್ಲಿ ಇಲಾಖೆಯ ವತಿಯಿಂದ ರಾಜ್ಯದ ವಿವಿಧ ಪೆಟ್ರೋಲ್ ಬಂಕ್‌ಗಳಿಂದ ಒಟ್ಟು 63 ಇಂಧನ ಮಾದರಿಗಳನ್ನು ಸಂಗ್ರಹಿಸಲಾಗಿತ್ತು.

ಆರಂಭದಲ್ಲಿ ಇ-20 ಇಂಧನದ ಪರೀಕ್ಷೆಗಾಗಿ ಈ ಮಾದರಿಗಳನ್ನು ತೈಲ ಮಾರುಕಟ್ಟೆ ಕಂಪನಿಗಳ ಅಧಿಕೃತ ಪ್ರಯೋಗಾಲಯಗಳಿಗೆ ಕಳುಹಿಸಲಾಗಿತ್ತು. ಆದರೆ ಎಥೆನಾಲ್ ಪ್ರಮಾಣದ ಕುರಿತು ನಿಖರ ಮಾಹಿತಿ ನೀಡಲು ಹಿಂದೇಟು ಹಾಕಲಾಯಿತು ಎಂದು ರಿಜ್ವಾನ್ ಅರ್ಷದ್ ಆರೋಪಿಸಿದರು.

ಬಳಿಕ ಮಾನ್ಯತೆ ಪಡೆದ ಖಾಸಗಿ ಪ್ರಯೋಗಾಲಯಕ್ಕೆ ಏಳು ಮಾದರಿಗಳನ್ನು ಕಳುಹಿಸಲಾಗಿತ್ತು. ಈ ಪೈಕಿ ಐದು ಮಾದರಿಗಳಲ್ಲಿ ಶೇ.20ಕ್ಕಿಂತ ಹೆಚ್ಚಿನ ಎಥೆನಾಲ್ ಅಂಶ ಪತ್ತೆಯಾಗಿದೆ. ಕೆಲವು ಮಾದರಿಗಳಲ್ಲಿ ಎಥೆನಾಲ್ ಪ್ರಮಾಣ ಶೇ.31.02ರಷ್ಟಿದೆ ಎಂದು ಪರೀಕ್ಷಾ ವರದಿಗಳನ್ನು ಉಲ್ಲೇಖಿಸಿ ತಿಳಿಸಿದರು.

ವಾಹನಗಳ ಮೈಲೇಜ್ ಮತ್ತು ದಕ್ಷತೆಗೆ ಹೊಡೆತ ಬೀಳುತ್ತಿದೆ ಎಂಬ ಆರೋಪ

ದೇಶದಲ್ಲಿ ಸುಮಾರು 35 ಕೋಟಿ ವಾಹನಗಳು ಸಂಚರಿಸುತ್ತಿದ್ದು, ಅವುಗಳಲ್ಲಿ ಶೇ.99ರಷ್ಟು ವಾಹನಗಳು ಇ-20ಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಿತ ಇಂಧನ ಬಳಕೆಗೆ ಸೂಕ್ತವಾಗಿ ವಿನ್ಯಾಸಗೊಂಡಿಲ್ಲ ಎಂದು ರಿಜ್ವಾನ್ ಅರ್ಷದ್ ಪ್ರತಿಪಾದಿಸಿದರು.

ಅಲ್ಲದೆ, ಪೆಟ್ರೋಲ್ ಬಂಕ್‌ಗಳಲ್ಲಿ ಬಳಕೆಯಲ್ಲಿರುವ ಹೆಚ್ಚಿನ ಇಂಧನ ವಿತರಣಾ ಘಟಕಗಳು ಶೇ.15ರಷ್ಟು ಎಥೆನಾಲ್ ಮಿಶ್ರಣಕ್ಕೆ ಮಾತ್ರ ಹೊಂದಿಕೊಳ್ಳುತ್ತವೆ ಎಂದು ಅವರು ಹೇಳಿದರು.

ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಣದಿಂದ ವಾಹನಗಳ ಮೈಲೇಜ್ ಕಡಿಮೆಯಾಗುವ ಹಾಗೂ ದುರಸ್ತಿ ವೆಚ್ಚ ಹೆಚ್ಚಾಗುವ ಆತಂಕವಿದೆ ಎಂದು ಅವರು ಆರೋಪಿಸಿದರು.

ತೈಲ ಕಂಪನಿಗಳಿಗೆ ಲಾಭ, ಗ್ರಾಹಕರಿಗೆ ನಷ್ಟ?

ಎಥೆನಾಲ್ ಮಿಶ್ರಣದಿಂದ ವಿದೇಶಿ ವಿನಿಮಯ ಉಳಿತಾಯವಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ ಅದರ ಪ್ರಯೋಜನ ಸಾಮಾನ್ಯ ಗ್ರಾಹಕರಿಗೆ ತಲುಪುತ್ತಿಲ್ಲ ಎಂದು ರಿಜ್ವಾನ್ ಅರ್ಷದ್ ಟೀಕಿಸಿದರು.

ವಾಹನ ಮಾಲೀಕರು ಮೈಲೇಜ್ ಕೊರತೆ ಹಾಗೂ ದುರಸ್ತಿ ವೆಚ್ಚದಿಂದ ಆರ್ಥಿಕ ಹೊರೆ ಅನುಭವಿಸುತ್ತಿದ್ದರೆ, ತೈಲ ಕಂಪನಿಗಳು ಹೆಚ್ಚಿನ ಲಾಭ ಗಳಿಸುತ್ತಿವೆ. ವಾಹನ ತಯಾರಿಕಾ ಕಂಪನಿಗಳೂ ಬಿಡಿಭಾಗಗಳು ಹಾಗೂ ಸರ್ವೀಸ್ ಮೂಲಕ ಶೇ.50ರಷ್ಟು ಲಾಭ ಗಳಿಸುತ್ತಿವೆ ಎಂದು ಅವರು ಆರೋಪಿಸಿದರು.

ಎಥೆನಾಲ್ ಬಳಕೆಯಿಂದ ವಾಹನಗಳ ಮೈಲೇಜ್ ಮೇಲೆ ಪರಿಣಾಮ ಬೀರುತ್ತದೆ ಎಂಬ ಅಂಶವನ್ನು ನೀತಿ ಆಯೋಗವೂ ಉಲ್ಲೇಖಿಸಿದೆ. ಆದರೆ ಈ ವಿಚಾರದ ಕುರಿತು ವ್ಯಕ್ತವಾಗುತ್ತಿರುವ ಟೀಕೆಗಳನ್ನು ಕೇಂದ್ರ ಸರ್ಕಾರ ‘ಪೇಯ್ಡ್ ಕ್ಯಾಂಪೇನ್’ ಎಂದು ಕರೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಜನರ ಪರ ಧ್ವನಿ ಎತ್ತಲು ಯಾವುದೇ ಭಯವಿಲ್ಲ’

ಪೆಟ್ರೋಲ್‌ನಲ್ಲಿ ಹೆಚ್ಚುವರಿ ಎಥೆನಾಲ್ ಮಿಶ್ರಣದ ಕುರಿತು ಪ್ರಯೋಗಾಲಯ ವರದಿಗಳನ್ನು ಬಹಿರಂಗಪಡಿಸಿರುವುದಕ್ಕೆ ತಮಗೆ ಯಾವುದೇ ಭಯವಿಲ್ಲ ಎಂದು ರಿಜ್ವಾನ್ ಅರ್ಷದ್ ಸ್ಪಷ್ಟಪಡಿಸಿದರು.

“ಹೆದರಬೇಡಿ ಎಂದು ರಾಹುಲ್ ಗಾಂಧಿಯವರು ಹೇಳಿದ್ದಾರೆ. ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡುತ್ತಿದ್ದೇನೆ. ಜನರ ಹಿತರಕ್ಷಣೆಗಾಗಿ ಪ್ರಮಾಣವಚನ ಸ್ವೀಕರಿಸಿದ್ದೇನೆ. ರಾಜಕೀಯ ಹಿನ್ನಡೆಯಾಗುವ ಭಯ ನನಗಿಲ್ಲ. ಜನರ ಪರವಾಗಿ ಧ್ವನಿ ಎತ್ತುತ್ತಲೇ ಇರುತ್ತೇನೆ” ಎಂದು ಹೇಳಿದರು.

Tags: BreakingNewsEthanol Blending in PetrolKarnatakaKarnataka Petrol Ethanol ControversyNewsHeadlinesRizwan Arshad Petrol StatementVijayasakshivijayasakshinews
ShareSendShare
Previous Post

ರೈಲ್ವೆ ಅಂಡರ್ ಬ್ರಿಡ್ಜ್ ಕಾಮಗಾರಿ ವೇಳೆ ಮಣ್ಣು ಕುಸಿತ; ತಾಂತ್ರಿಕ ಸಿಬ್ಬಂದಿ ಸಾವು, ಮತ್ತೊಬ್ಬರಿಗೆ ಗಂಭೀರ ಗಾಯ

Next Post

ಗಂಡ, ಇಬ್ಬರು ಮಕ್ಕಳಿದ್ರೂ ಮತ್ತೊಬ್ಬನ ಜೊತೆ ಪ್ರೀತಿ: ರೈಲ್ವೆ ಹಳಿಯಲ್ಲಿ ಇಬ್ಬರ ಬದುಕು ಅಂತ್ಯ!

Vijaya Sakshi News Desk

Vijaya Sakshi News Desk

Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

Next Post
ಗಂಡ, ಇಬ್ಬರು ಮಕ್ಕಳಿದ್ರೂ ಮತ್ತೊಬ್ಬನ ಜೊತೆ ಪ್ರೀತಿ: ರೈಲ್ವೆ ಹಳಿಯಲ್ಲಿ ಇಬ್ಬರ ಬದುಕು ಅಂತ್ಯ!

ಗಂಡ, ಇಬ್ಬರು ಮಕ್ಕಳಿದ್ರೂ ಮತ್ತೊಬ್ಬನ ಜೊತೆ ಪ್ರೀತಿ: ರೈಲ್ವೆ ಹಳಿಯಲ್ಲಿ ಇಬ್ಬರ ಬದುಕು ಅಂತ್ಯ!

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

November 4, 2026
Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

October 25, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ಅಂಡರ್-19 ಏಷ್ಯಾಕಪ್ ನಲ್ಲಿ ಆರ್ಯವೀರ್ ಸೆಹ್ವಾಗ್ ಅಬ್ಬರ: ನೇಪಾಳ ವಿರುದ್ಧ ಭಾರತಕ್ಕೆ 10 ವಿಕೆಟ್ ಗಳ ಭರ್ಜರಿ ಜಯ!

ಅಂಡರ್-19 ಏಷ್ಯಾಕಪ್ ನಲ್ಲಿ ಆರ್ಯವೀರ್ ಸೆಹ್ವಾಗ್ ಅಬ್ಬರ: ನೇಪಾಳ ವಿರುದ್ಧ ಭಾರತಕ್ಕೆ 10 ವಿಕೆಟ್ ಗಳ ಭರ್ಜರಿ ಜಯ!

November 6, 2026
ಗಂಡ, ಇಬ್ಬರು ಮಕ್ಕಳಿದ್ರೂ ಮತ್ತೊಬ್ಬನ ಜೊತೆ ಪ್ರೀತಿ: ರೈಲ್ವೆ ಹಳಿಯಲ್ಲಿ ಇಬ್ಬರ ಬದುಕು ಅಂತ್ಯ!

ಗಂಡ, ಇಬ್ಬರು ಮಕ್ಕಳಿದ್ರೂ ಮತ್ತೊಬ್ಬನ ಜೊತೆ ಪ್ರೀತಿ: ರೈಲ್ವೆ ಹಳಿಯಲ್ಲಿ ಇಬ್ಬರ ಬದುಕು ಅಂತ್ಯ!

November 6, 2026
ಪೆಟ್ರೋಲ್ ನಲ್ಲಿ ಶೇ.31.02ರಷ್ಟು ಎಥೆನಾಲ್ ಪತ್ತೆಯಾಗಿದೆ: ರಿಜ್ವಾನ್ ಅರ್ಷದ್ ಗಂಭೀರ ಆರೋಪ

ಪೆಟ್ರೋಲ್ ನಲ್ಲಿ ಶೇ.31.02ರಷ್ಟು ಎಥೆನಾಲ್ ಪತ್ತೆಯಾಗಿದೆ: ರಿಜ್ವಾನ್ ಅರ್ಷದ್ ಗಂಭೀರ ಆರೋಪ

November 6, 2026
ರೈಲ್ವೆ ಅಂಡರ್ ಬ್ರಿಡ್ಜ್ ಕಾಮಗಾರಿ ವೇಳೆ ಮಣ್ಣು ಕುಸಿತ; ತಾಂತ್ರಿಕ ಸಿಬ್ಬಂದಿ ಸಾವು, ಮತ್ತೊಬ್ಬರಿಗೆ ಗಂಭೀರ ಗಾಯ

ರೈಲ್ವೆ ಅಂಡರ್ ಬ್ರಿಡ್ಜ್ ಕಾಮಗಾರಿ ವೇಳೆ ಮಣ್ಣು ಕುಸಿತ; ತಾಂತ್ರಿಕ ಸಿಬ್ಬಂದಿ ಸಾವು, ಮತ್ತೊಬ್ಬರಿಗೆ ಗಂಭೀರ ಗಾಯ

November 6, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ಅಂಡರ್-19 ಏಷ್ಯಾಕಪ್ ನಲ್ಲಿ ಆರ್ಯವೀರ್ ಸೆಹ್ವಾಗ್ ಅಬ್ಬರ: ನೇಪಾಳ ವಿರುದ್ಧ ಭಾರತಕ್ಕೆ 10 ವಿಕೆಟ್ ಗಳ ಭರ್ಜರಿ ಜಯ!

ಅಂಡರ್-19 ಏಷ್ಯಾಕಪ್ ನಲ್ಲಿ ಆರ್ಯವೀರ್ ಸೆಹ್ವಾಗ್ ಅಬ್ಬರ: ನೇಪಾಳ ವಿರುದ್ಧ ಭಾರತಕ್ಕೆ 10 ವಿಕೆಟ್ ಗಳ ಭರ್ಜರಿ ಜಯ!

November 6, 2026
ಗಂಡ, ಇಬ್ಬರು ಮಕ್ಕಳಿದ್ರೂ ಮತ್ತೊಬ್ಬನ ಜೊತೆ ಪ್ರೀತಿ: ರೈಲ್ವೆ ಹಳಿಯಲ್ಲಿ ಇಬ್ಬರ ಬದುಕು ಅಂತ್ಯ!

ಗಂಡ, ಇಬ್ಬರು ಮಕ್ಕಳಿದ್ರೂ ಮತ್ತೊಬ್ಬನ ಜೊತೆ ಪ್ರೀತಿ: ರೈಲ್ವೆ ಹಳಿಯಲ್ಲಿ ಇಬ್ಬರ ಬದುಕು ಅಂತ್ಯ!

November 6, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper