HomeGadag Newsಶಿರಹಟ್ಟಿಯಲ್ಲಿ 355ನೇ ಆರಾಧನಾ ಮಹೋತ್ಸವದ ಉತ್ತರಾಧನೆ

ಶಿರಹಟ್ಟಿಯಲ್ಲಿ 355ನೇ ಆರಾಧನಾ ಮಹೋತ್ಸವದ ಉತ್ತರಾಧನೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ನಡೆದ ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಉತ್ತರಾಧನೆ ಅಂಗವಾಗಿ ಸೋಮವಾರ ರಾಯರ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿತು.

ಬೆಳಿಗ್ಗೆ ಸುಪ್ರಭಾತದೊಂದಿಗೆ ಪೂಜಾ ಕೈಂಕರ್ಯಗಳು ಆರಂಭಗೊಂಡವು. ಶ್ರೀ ರಾಘವೇಂದ್ರ ಸ್ತೋತ್ರ, ಅಷ್ಟೋತ್ತರ, ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರುಗಿದವು.

ಮಧ್ಯಾಹ್ನ 12 ಗಂಟೆಗೆ ರಾಯರ ಪಲ್ಲಕ್ಕಿ ಉತ್ಸವ ನೆರವೇರಿತು. ಬಳಿಕ ಮಧ್ಯಾಹ್ನ 12.30ರ ಸುಮಾರಿಗೆ ನೆರೆದಿದ್ದ ನೂರಾರು ಭಕ್ತರ ಸಮ್ಮುಖದಲ್ಲಿ ಶ್ರೀಮಠದ ಅರ್ಚಕ ನರಸಿಂಹ ಆಚಾರ್ಯ ಮಣ್ಣೂರ ಅವರು ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರು ರಾಯರ ನಾಮಸ್ಮರಣೆ ಮಾಡುತ್ತ ಶ್ರೀಮಠದ ಆವರಣದಲ್ಲಿ ಭಕ್ತಿಭಾವ ಮೆರೆದರು.

ಬಳಿಕ ನೈವೇದ್ಯ, ಹಸ್ತೋದಕ, ಮಹಾಮಂಗಳಾರತಿ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮಗಳು ನೆರವೇರಿದವು.

ಈ ಸಂದರ್ಭದಲ್ಲಿ ಶ್ರೀ ರಾಘವೇಂದ್ರ ಸ್ವಾಮೀ ಕಮಿಟಿ ಅಧ್ಯಕ್ಷ ಶಶಿಕಾಂತ ಪಾಶ್ಚಾಪೂರ, ವಿನಾಯಕ ಸದರಜೋಶಿ, ಗುರುನಾಥ ಪಾಟೀಲ, ಸಂತೋಷ ಕುಬೇರ, ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ನರಸಿಂಹ ಕುಲಕರ್ಣಿ, ವಿಲಾಸ ಸೊರಟೂರ, ಡಾ. ವಿಜಯದತ್ತ ಮಂಗಸೂಳಿ, ಜಯತೀರ್ಥ ಕುಲಕರ್ಣಿ, ಆನಂದ ಸೊರಟೂರ, ಸುಧೀರ ಜಮಖಂಡಿ, ಅರುಣ ಸೊರಟೂರ, ಅಮೃತ ಭಾತಖಂಡೆ, ಅನಿಲ ಪಾಶ್ಚಾಪೂರ, ಶ್ರೀನಿವಾಸ ಶಿರಹಟ್ಟಿ, ಶ್ರೀಧರ ಕುಲಕರ್ಣಿ, ಲಚ್ಚಪ್ಪ ಮುಳಗುಂದ, ಉದಯ ಕುಲಕರ್ಣಿ, ಡಾ. ವೇದವ್ಯಾಸ ಮಹಿಷಿ, ವಸಂತ ಪಾಶ್ಚಾಪೂರ, ಅಶೋಕ ಕುಲಕರ್ಣಿ, ರಾಮಣ್ಣ ಅಗ್ನಿಹೋತ್ರಿ, ನಾರಾಯಣ ಅಗ್ನಿಹೋತ್ರಿ, ಸತೀಶ ದೇಶಪಾಂಡೆ, ಗಿರೀಶ ದೇಶಪಾಂಡೆ, ದೀಪು ಸೊರಟೂರ, ವಸಂತ ಬಿಜಾಪೂರ, ಗೌರೀಶ ಕುಬೇರ, ಪ್ರಹ್ಲಾದ ಉಮರ್ಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img