HomeKarnataka Newsಅಭಿಮನ್ಯು ನಿವೃತ್ತಿ ಬಳಿಕ ಪ್ರಶಾಂತನಿಗೆ ಪಟ್ಟ! ಜಂಬೂ ಸವಾರಿಯಲ್ಲಿ 750 ಕೆಜಿ ಚಿನ್ನದ ಅಂಬಾರಿ ಹೊರುವ...

ಅಭಿಮನ್ಯು ನಿವೃತ್ತಿ ಬಳಿಕ ಪ್ರಶಾಂತನಿಗೆ ಪಟ್ಟ! ಜಂಬೂ ಸವಾರಿಯಲ್ಲಿ 750 ಕೆಜಿ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ

For Dai;y Updates Join Our whatsapp Group

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯಲ್ಲಿ ಈ ಬಾರಿ ಚಿನ್ನದ ಅಂಬಾರಿ ಹೊರಲಿರುವ ಆನೆ ಯಾವುದು ಎಂಬ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ.

ಅಭಿಮನ್ಯು ಆನೆ ನಿವೃತ್ತಿಯಾದ ಹಿನ್ನೆಲೆಯಲ್ಲಿ ದಸರಾ ಗಜಪಡೆಗೆ ಹೊಸ ನಾಯಕನ ಆಯ್ಕೆ ನಡೆದಿದ್ದು, 54 ವರ್ಷದ ಪ್ರಶಾಂತ ಆನೆಗೆ ಚಿನ್ನದ ಅಂಬಾರಿ ಹೊರುವ ಮಹತ್ವದ ಜವಾಬ್ದಾರಿ ನೀಡಲಾಗಿದೆ. ಹೌದು.. ಈ ಬಾರಿ ಮೊದಲ ಬಾರಿಗೆ ಪ್ರಶಾಂತ ಆನೆ ಚಿನ್ನದ ಅಂಬಾರಿ ಹೊರಲಿದ್ದು, ಈ ಕುರಿತು ರಾಜ್ಯ ಸರ್ಕಾರ ಅಧಿಕೃತ ಘೋಷಣೆ ಮಾಡಿದೆ.

ಅಷ್ಟಕ್ಕೂ ಪ್ರಶಾಂತ ಆನೆಯನ್ನೇ ಆಯ್ಕೆ ಮಾಡಿದ್ದು ಯಾಕೆ ಗೊತ್ತಾ?

ಈ ಕುರಿತು ಮಾತನಾಡಿರುವ ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ, ದಸರಾಗೆ ಕರೆತರಲಾದ ಆನೆಗಳ ಸ್ವಭಾವ, ದೈಹಿಕ ಸಾಮರ್ಥ್ಯ ಹಾಗೂ ನಡವಳಿಕೆಯನ್ನು ಪರಿಶೀಲಿಸಿ ಪ್ರಶಾಂತನನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಧನಂಜಯ ಆನೆ ಮೀಸಲು ಆನೆಯಾಗಿ ಇರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಹಾಗಾದರೆ ಈ ಪ್ರಶಾಂತ ಆನೆಯ ವಿಶೇಷತೆಗಳೇನು?

ದುಬಾರೆ ಆನೆ ಶಿಬಿರಕ್ಕೆ ಸೇರಿದ ಪ್ರಶಾಂತನಿಗೆ ಈಗ 54 ವರ್ಷ ವಯಸ್ಸು. ಸುಮಾರು 5,100 ಕೆಜಿ ತೂಕ ಹೊಂದಿರುವ ಈ ಆನೆ ಬಲಿಷ್ಠ ದೇಹ ಹಾಗೂ ಶಿಸ್ತುಬದ್ಧ ನಡವಳಿಕೆಗೆ ಹೆಸರುವಾಸಿಯಾಗಿದೆ.

1993ರಲ್ಲಿ ಶಿವಮೊಗ್ಗ ಜಿಲ್ಲೆಯ ಕಾರೆಕೊಪ್ಪ ಅರಣ್ಯ ಪ್ರದೇಶದಲ್ಲಿ ಪ್ರಶಾಂತನನ್ನು ಅರಣ್ಯ ಇಲಾಖೆ ಸೆರೆಹಿಡಿದಿತ್ತು. ಬಳಿಕ ಪಳಗಿಸಿ ವಿಶೇಷ ತರಬತಿ ನೀಡಲಾಗಿತ್ತು. ಅರಣ್ಯ ಇಲಾಖೆಯ ವಿವಿಧ ಕಾರ್ಯಾಚರಣೆಗಳಲ್ಲಿ ಸೇವೆ ಸಲ್ಲಿಸಿರುವ ಪ್ರಶಾಂತ, ಕಳೆದ 18 ವರ್ಷಗಳಿಂದ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.

ಕಳೆದ ಬಾರಿಯ ದಸರಾದಲ್ಲಿ ಸಾಲಾನೆಯಾಗಿ ಭಾಗವಹಿಸಿದ್ದ ಪ್ರಶಾಂತ, ಈ ಬಾರಿ ಗಜಪಡೆಯ ನಾಯಕನಾಗಿ ಜಂಬೂ ಸವಾರಿಯಲ್ಲಿ ಹೆಜ್ಜೆ ಹಾಕಲಿದೆ. ಒಟ್ಟಿನಲ್ಲಿ ಅಭಿಮನ್ಯು ನಿವೃತ್ತಿ ಬಳಿಕ ಪ್ರಶಾಂತ ಆನೆಗೆ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ದೊರೆತಿದ್ದು, ಈ ಬಾರಿಯ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಹೊಸ ಗಜ ನಾಯಕನ ಹೆಜ್ಜೆ ವಿಶೇಷ ಆಕರ್ಷಣೆಯಾಗಲಿದೆ.

 

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img