Homecultureಧರ್ಮ ಸಮ್ಮೇಳನದಲ್ಲಿ ಚಿಣ್ಣರ ಕಲರವ

ಧರ್ಮ ಸಮ್ಮೇಳನದಲ್ಲಿ ಚಿಣ್ಣರ ಕಲರವ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಸಮೀಪದ ಅಬ್ಬಿಗೇರಿಯಲ್ಲಿ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ದೊಡ್ಡವರಿಗೆ ರಂಭಾಪುರಿ ಜಗದ್ಗುರುಗಳವರ ಆಶೀರ್ವಚನ ಸಂದೇಶ, ಶ್ರೀಗಳವರ ಆಶೀರ್ವಾದದ ನುಡಿಗಳು, ಸಾಧಕರ ನುಡಿಗಳು, ಉಪನ್ಯಾಸಗಳು ಮುಂತಾದ ವಿಶೇಷ ಕಾರ್ಯಕ್ರಮಗಳು ಮನ ಸೆಳೆಯುತ್ತಿವೆ.

ದೊಡ್ಡವರೆಲ್ಲರೂ ಸಂಜೆ ಆಗುವುದನ್ನೇ ಕಾಯುತ್ತಿದ್ದರೆ, ಚಿಕ್ಕವರ ಮನರಂಜನೆಗೂ ಇಲ್ಲಿ ವ್ಯವಸ್ಥೆಯಾಗಿದೆ.

ಸಂಜೆ ವೇಳೆ ಜನರನ್ನು ಆಕರ್ಷಿಸಲು ಬಗೆಬಗೆಯ ಜೋಕಾಲಿಗಳು ತಲೆ ಎತ್ತಿವೆ. ಅದರಲ್ಲಿ ಆಟ ಆಡಲು ಚಿಣ್ಣರು ತುದಿಗಾಲ ಮೇಲೆ ನಿಂತಿದ್ದಾರೆ. ಸಂಜೆ ಆದರೆ ಸಾಕು ಕುಟುಂಬ ಸಮೇತ ಆಗಮಿಸುವವರಿಗೆ ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರ ಸ್ವಾಗತ ಕೋರುತ್ತಿವೆ. ಕೆಲವರು ನಾನಾ ವಸ್ತುಗಳ ಖರೀದಿಯ ಸಂಭ್ರಮದಲ್ಲಿ ಮುಳುಗಿದ್ದರೆ, ಸಣ್ಣ ಮಕ್ಕಳು ಜೋಕಾಲಿ, ಬ್ರೇಕ್ ಡ್ಯಾನ್ಸ್, ಜೈಂಟ್ ವ್ಹೀಲ್, ಜಂಪಿಂಗ್ ಜಪಾಂಗ್ ಆಟ ಆಡುವ ಮೂಲಕ ಭರ್ಜರಿ ಮನರಂಜನೆ ಪಡೆಯುತ್ತಿದ್ದಾರೆ. ಗುರುನಾಥ ವಛಗಲೆ ಹಾಗೂ ಬಸವರಾಜ ಎಚ್. ಅವರು ದಸರಾ ದರ್ಬಾರ್‌ನಲ್ಲಿ ಮಕ್ಕಳಿಗಾಗಿ ಬಗೆಬಗೆಯ ಜೋಕಾಲಿಗಳನ್ನು ಅಳವಡಿಸಿದ್ದಾರೆ.

LEAVE A REPLY

Please enter your comment!
Please enter your name here

E-Paper

E-paper

Must Read

spot_img