ವಿಜಯಸಾಕ್ಷಿ ಸುದ್ದಿ, ತುಮಕೂರು: ಇಂಡಿಯನ್ ಓವರ್ ಸೀಸ್ ಬ್ಯಾಂಕ್ ನ ಎಟಿಎಂ ಮಷೀನನ್ನೇ ಕಳ್ಳರು ಹೊತ್ತೊಯ್ದಿರೋ ಘಟನೆ ತಾಲೂಕಿನ ಹೆಗ್ಗೆರೆಯಲ್ಲಿ ನಡೆದಿದೆ.
Advertisement
ನಸುಕಿನಜಾವ 3 ಗಂಟೆಗೆ ಈ ಘಟನೆ ನಡೆದಿದ್ದು, ಖತರ್ನಾಕ್ ಕಳ್ಳರ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಬ್ಬರು ಖತರ್ನಾಕ್ ಕಳ್ಳರಿಂದ ಎಟಿಎಂ ಮೆಷಿನ್ ಕಳವು ಮಾಡಲಾಗಿದೆ. ಎಟಿಎಂ ಮಷೀನ್ ಗೂ ಆಚೆಯ ವಾಹನಕ್ಕೂ ಹಗ್ಗ ಕಟ್ಟಿ ಎಳೆದಿದ್ದಾರೆ. ವಾಹನ ಎಳೆದ ರಭಸಕ್ಕೆ ಇಡೀ ಎಟಿಎಂ ಕಳ್ಳರ ಪಾಲಾಗಿದೆ.
ಎಟಿಎಂನಲ್ಲಿದ್ದ ಹಣ ಕದ್ದು ಮಲ್ಲಸಂದ್ರದಲ್ಲಿ ಮಷೀನ್ ಬಿಸಾಡಿ ಕಳ್ಳರು ನಾಪತ್ತೆಯಾಗಿದ್ದಾರೆ. ತುಮಕೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಖತರ್ನಾಕ್ ಕಳ್ಳರಿಗೆ ಗ್ರಾಮೀಣ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ.