ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕೋವಿಡ್ ಸೋಂಕು ನಿವಾರಿಸುವ ಸಂಜೀವಿನಿ ಗುರುವಾರ ಸಂಜೆ 7 ಗಂಟೆಗೆ ಕೊಪ್ಪಳ ನಗರದ ಹಳೆ ಜಿಲ್ಲಾಸ್ಪತ್ರೆಗೆ ಬಾಗಲಕೋಟೆಯಿಂದ ಬಂದು ತಲುಪಿದೆ.
Advertisement
6,500 ಡೋಸ್ ಹಾಗೂ 37,800 ಸಿರೇಂಜ್ ಹೊತ್ತ ವ್ಯಾಕ್ಸಿನ್ ವ್ಯಾನ್ ಈಗಾಗಲೇ ಬಂದು ತಲುಪಿದೆ. ವ್ಯಾಕ್ಸಿನ್‌ನ್ನು ಆರೋಗ್ಯ ಅಧಿಕಾರಿಗಳು ಸಿಬ್ಬಂದಿ ಸ್ಟೋರ್ ರೂಮ್‌ನಲ್ಲಿ ಸಂಗ್ರಹಿಸಿದ್ರು.
ಆರ್ ಸಿಎಚ್ ಅಧಿಕಾರಿ ಡಾ. ಜಂಬಯ್ಯ ಈ ಸಂದರ್ಭದಲ್ಲಿ ಮಾತನಾಡಿ, ಜನವರಿ 16 ರಂದು 4 ಸೆಂಟರ್‌ನಲ್ಲಿ ಪ್ರಯೋಗ ಮಾಡಲಾಗುವುದು. ನಂತರ ಇನ್ನು 10 ಸೆಂಟರ್‌ಗಳನ್ನು ಗುರುತಿಸಿ ವ್ಯಾಕ್ಸಿನ್ ನೀಡಲಾಗುವುದು ಎಂದು ಮಾಹಿತಿ ನೀಡಿದರು.