ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರೇಗಲ್ಲ
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಶುಕ್ರವಾರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪೊಲೀಸ್ ಇಲಾಖೆಯ ಆಶ್ರಯದಲ್ಲಿ ಕೊರೊನಾ ವೈರಸ್ ನಿಯಂತ್ರಿಸಲು ಜನಾಂದೋಲನ ಪ್ರತಿಜ್ಞಾ ವಿಧಿಯನ್ನು ಪಿಎಸ್‌ಐ ಬಸವರಾಜ ಕೊಳ್ಳಿ ಬೋಧಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಎ.ಡಿ. ಸಾಮುದ್ರಿ, ಆರೋಗ್ಯ ಸಹಾಯಕ ಎಸ್.ಎಫ್. ಅಂಗಡಿ, ಎಸ್.ಎನ್. ಪಾಟೀಲ, ಮಂಜುನಾಥ ಜಾಲಿಹಾಳ, ರೋಣ ಮಂಡಲ ಬಿಜೆಪಿ ಅಧ್ಯಕ್ಷ ಮುತ್ತು ಕಡಗದ ತಾ.ಪಂ ಸದಸ್ಯ ಅಂದಾನಪ್ಪ ದೊಡ್ಡಮೇಟಿ, ಅಶೋಕ ಬೇವಿನಕಟ್ಟಿ, ನಿಂಗಪ್ಪ ಕಣವಿ, ಅಂದಪ್ಪ ವೀರಾಪೂರ, ಹನಮಂತ ದ್ವಾಸಲ್, ಬಸವರಾಜ ವೀರಾಪೂರ, ಯಲ್ಲಪ್ಪ ಮಣ್ಣೊಡ್ಡರ, ಅಲ್ಲಾಭಕ್ಷಿ ನದಾಫ, ರಾಜೇಶ ಅಂಗಡಿ ಪಾಲ್ಗೊಂಡಿದ್ದರು.
Advertisement