25.8 C
Gadag
Friday, June 9, 2023

ಕೊರೊನಾ ಲಸಿಕೆ ಬಳಕೆಗೆ DCGI ಅನುಮತಿ; ಜ.15 ರೊಳಗೆ ಜನರಿಗೆ ಲಸಿಕೆ ವಿತರಣೆ ಸಾಧ್ಯತೆ!

Spread the love

ವಿಜಯಸಾಕ್ಷಿ ಸುದ್ದಿ, ದೆಹಲಿ

ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ರಾಮಬಾಣ ಸಿಕ್ಕಿದ್ದು, ಸ್ವದೇಶಿ ಮೂಲದ ಕೊವ್ಯಾಕ್ಸಿನ್ ಮತ್ತು ಕೋವಿಶಿಲ್ಡ್ ಎಂಬ ಎರಡು ಕೊರೊನಾ ಲಸಿಕೆಗಳ ಷರತ್ತು ಬದ್ಧ ಬಳಕೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮತಿ ನೀಡಿದೆ.

ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಹತ್ವದ ಘೋಷಣೆ ನೀಡಿದ DCGI ಅಧ್ಯಕ್ಷ ವಿ.ಜಿ.ಸೋಮಾನಿ ಅವರು, ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳನ್ನು ತುರ್ತು ಸಂದರ್ಭದಲ್ಲಿ ಬಳಕೆ ಮಾಡಬಹುದು.ರೂಪಾಂತರಿ ಕೊರೊನಾ ವೈರಸ್ ಗೂ ಈ ಲಸಿಕೆಗಳು ಪರಿಣಾಮಕಾರಿ ಆಗಿದ್ದು,18 ವರ್ಷ ಮೇಲ್ಪಟ್ಟವರಿಗೆ ಲಸಿಕೆಗಳು ಸುರಕ್ಷಿತವಾಗಿವೆ ಎಂದು ತಿಳಿಸಿದರು.

ಇವೆರಡೂ ಲಸಿಕೆಗಳನ್ನು ಸುಮಾರು 28,000 ಜನರ ಮೇಲೆ ಪ್ರಾಯೋಗಿಕ ಪರೀಕ್ಷೆ ಮಾಡಲಾಗಿದೆ. ಲಸಿಕೆಯ ಎರಡು ಡೋಸ್ ವಿತರಿಸಲು ಸಲಹೆ ನೀಡಿದೆ. ಹಾಗಾಗಿ ಕೇಂದ್ರ ಆರೋಗ್ಯ ಇಲಾಖೆಯು ಇದಕ್ಕಾಗಿ ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸಿ ಜ.15 ರೊಳಗಾಗಿ ಲಸಿಕೆ ವಿತರಿಸುವ ಸಾಧ್ಯತೆಗಳಿವೆ.

ಬ್ರಿಟನ್ನಿನ ಆಕ್ಸಪರ್ಡ್ ವಿಶ್ವವಿದ್ಯಾಲಯ ಹಾಗೂ ಫಾರ್ಮಾ ದೈತ್ಯ ಸಂಸ್ಥೆಯಾದ ಆಸ್ಟ್ರಾಜೆನಿಕಾ ವಿಜ್ಞಾನಿಗಳ ಸಹಯೋಗದೊಂದಿಗೆ ಭಾರತದ ಸೆರಮ್ ಇನ್ಸ್ಟಿಟ್ಯೂಟ್ ಸಂಸ್ಥೆ ಲಸಿಕೆಗಳನ್ನು ಅಭಿವೃದ್ಧಿ ಪಡಿಸಿವೆ. ಭಾರತ್ ಬಯೋಟೆಕ್ ಸಂಸ್ಥೆ ಕೋವ್ಯಾಕ್ಸಿನ್ ಲಸಿಕೆ ಉತ್ಪಾದಿಸಿದ್ದು, ಸಂಪೂರ್ಣ ಸ್ವದೇಶಿ ಲಸಿಕೆಯಾಗಿದೆ ಕೋವಿಶಿಲ್ಡ್ ಲಸಿಕೆಯನ್ನು ಆಕ್ಷಪರ್ಡ್ ವಿವಿಯ ಸಹಭಾಗಿತ್ವದಲ್ಲಿ ತಯಾರಿಸಲಾಗಿದೆ.

ಆತ್ಮ ನಿರ್ಭರ ಭಾರತದ ಕನಸು ನನಸಾಗಿದೆ. ಲಸಿಕೆ ಸಂಶೋಧನೆಗೆ ಶ್ರಮಿಸಿದ ವಿಜ್ಞಾನಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟರ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಶನಿವಾರ(ಜ.೨) ರಂದು ದೇಶದ ಎಲ್ಲಾ ರಾಜ್ಯಗಳ ಎರಡೆರಡು ನಗರಗಳಲ್ಲಿ ಲಸಿಕೆಗಳ ಡ್ರೈರನ್ ನಡೆಸಲಾಗಿತ್ತು.

ಆಕ್ಸ್‌ಫರ್ಡ್ ಇನ್ಸ್ಟಿಟ್ಯೂಟ್ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಕೋವಿಶಿಲ್ಡ್ ಲಸಿಕೆಯ ಅಧ್ಯಯನ ಇನ್ನೂ ಪೂರ್ಣಗೊಂಡಿಲ್ಲವಾದರೂ ಕೋವಿಡ್ ಸಂಕಷ್ಟವಿರುವ ಹಿನ್ನೆಲೆಯಲ್ಲಿ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.


Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike
3,802FollowersFollow
0SubscribersSubscribe
- Advertisement -spot_img

Latest Posts