ಕೊವಿಡ್ ಗುಣಮುಖರೇ, ಇಲ್ಲಿವೆ ಹೊಸ ಗೈಡ್‌ಲೈನ್ಸ್; ಚೇತರಿಕೆಯ ನಂತರವೂ ಜಾಗೃತಿಯಿರಲಿ

0
Spread the love

Advertisement

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಅಲ್ಲಲ್ಲಿ ಕೊವಿಡ್‌ನಿಂದ ಗುಣಮುಖರಾದ ಕೆಲವರು ಮತ್ತೆ ಕೊವಿಡ್ ಪೀಡಿತರಾದ ಘಟನೆ ಸಂಭವಿಸಿವೆ. ಇದು ಬೆರಳೆಣಿಕೆಯ ಸಂಖ್ಯೆಯಾದರೂ, ಒಮ್ಮೆ ಗುಣಮುಖರಾದರು ಎಂದ ಮಾತ್ರಕ್ಕೆ ಎಲ್ಲ ಲಕ್ಷಣಗಳು, ಎಲ್ಲ ತೊಂದರೆಗಳು ಮಾಯವಾಗುವುದಿಲ್ಲ ಎಂದು ಭಾನುವಾರ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಅದರಲ್ಲೂ ಗುಣಮುಖರಾದ ವಯಸ್ಸಾದವರು, ತೀವ್ರ ಬಾಧಿತರಾಗಿ ಚೇತರಿಕೆ ಹೊಂದಿದವರು, ಇತರ ಕಾಯಿಲೆಯಿದ್ದು ಕೊವಿಡ್‌ನಿಂದ ಗುಣಮುಖರಾದವರಿಗಾಗಿ ಕೇಂದ್ರ ಆರೋಗ್ಯ ಇಲಾಖೆಯು ಹೊಸ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ.

ಇಂತವರಲ್ಲಿ ನೆಗೆಟಿವ್ ಬಂದ ನಂತರದ ಹಲವು ದಿನಗಳ ಕಾಲ ಆಯಾಸ, ಮೈ ಕೈ ನೋವು, ಕೆಲವೊಮ್ಮೆ ಎದೆ ನೋವು ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಉಸಿರಾಟ ಸಮಸ್ಯೆಯಾಗಬಹುದು, ದೇಹದಲ್ಲಿ ಆಮ್ಲಜನಕದ ಮಟ್ಟ ಕಡಿಮೆಯಾಗಬಹುದು.

ಹೀಗಾಗಿ ಗುಣಮುಖರಾದ ನಂತರವೂ ನಿಯಮಿತವಾಗಿ ವ್ಯಾಯಾಮ ಮಾಡಬೇಕು, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವಿಸಬೇಕು.  ಮೊದಲಿನಂತೆ ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಿಕೆ ಮುಂತಾದ ಕೊವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು.

ತೀರಾ ತೊಂದರೆ ಎನಿಸಿದರೆ ಸಮುದಾಯ ಆರೋಗ್ಯ ಕಾರ್ಯಕರ್ತರನ್ನು ಅಥವಾ ನೇರವಾಗಿ ವೈದ್ಯರನ್ನು ಸಂಪರ್ಕಿಸಬೇಕು ಎಂದು ಕೇಂದ್ರ ಆರೋಗ್ಯ ಇಲಾಖೆ ಸೂಚಿಸಿದೆ.


Spread the love

LEAVE A REPLY

Please enter your comment!
Please enter your name here