ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
Advertisement
ಶಹರದ ಹುಬ್ಬಳ್ಳಿ ರಸ್ತೆ ಗಣೇಶ ಕಾಲೋನಿಯ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಎಂಬುವವರ ಮನೆಯ ಬಾಗಿಲದ ಕೀಲಿ ಮುರಿದ ಕಳ್ಳರು, ಮನೆಯಲ್ಲಿದ್ದ ಬಂಗಾರ ಮತ್ತು ಬೆಳ್ಳಿ ಆಭರಣ, ನಗದು ದೋಚಿಕೊಂಡು ಹೋಗಿದ್ದಾರೆ.
ಯಾವುದೋ ವಸ್ತುವಿನಿಂದ ಕೀಲಿ ಮೀಟಿ ತೆಗೆದು ಮನೆಯೊಳಗೆ ನುಗ್ಗಿದ್ದಾರೆ. ಅಲ್ಲದೇ, ಮನೆಯ ಬೆಡ್ ರೂಮ್ ನ ಟ್ರೇಜುರಿಯಲ್ಲಿದ್ದ 1,77,000 ರೂ. ಮೌಲ್ಯದ 38 ಗ್ರಾಂ ಚಿನ್ನ ಮತ್ತು 600 ಗ್ರಾಂ ಬೆಳ್ಳಿ ಸಾಮಾನುಗಳು, 60 ಸಾವಿರ ನಗದು ಸೇರಿ ಒಟ್ಟು 2,37,000 ರೂ.ದಷ್ಟು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.
ಈ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ಗಿರಿಜಾ ಜಕ್ಕಲಿ ತನಿಖೆ ಕೈಗೊಂಡಿದ್ದಾರೆ.