ವಿಜಯಸಾಕ್ಷಿ ಸುದ್ದಿ, ಸುರಪುರ
Advertisement
ಕಾಲಜ್ಞಾನಿ ಕೊಡೆಕಲ್ ಬಸವೇಶ್ವರ ದೇವಸ್ಥಾನದ ಹುಂಡಿ ಕಳ್ಳತನ ಮಾಡಲು ಪ್ರಯತ್ನಿಸಿದ್ದ ರಾಜನಕೋಳೂರು ಗ್ರಾಮದ ಮಾಳಿಂಗರಾಯ ದೇವಪ್ಪ ನಾಯ್ಕೋಡಿ ಎಂಬ ವ್ಯಕ್ತಿಗೆ ಸುರಪುರ ಜೆಎಮ್‌ಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಅಮರನಾಥ್ ಬಿ.ಎನ್. ಅವರು ಅಪರಾಧಿಗೆ 3 ವರ್ಷ ಜೈಲು ಹಾಗೂ 5000 ರೂ. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಕೊಡೆಕಲ್ ಪಿಎಸ್‌ಐ ಬಾಷುಮಿಯಾ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ಸರ್ಕಾರದ ಪರ ನ್ಯಾಯವಾದಿ ನಾಗರಾಜ್ ವಾದ ಮಂಡಿಸಿದ್ದರು.