ವಿಜಯಸಾಕ್ಷಿ ಸುದ್ದಿ, ಗದಗ
ಕಳೆದ ಒಂದು ವಾರದಿಂದ ನಗರಸಭೆ ಕಚೇರಿಯಲ್ಲಿ ವಿದ್ಯುತ್ ಇಲ್ಲವೆಂಬ ಗುಮಾನಿ ಎದ್ದಿತ್ತು. ಅದಕ್ಕೆ ಬುಧವಾರದಂದು (ಫೆ.10) ನಡೆದ ತಾಲೂಕು ಪಂಚಾಯತಿ ಪ್ರಗತಿ ಪರಿಶೀಲನಾ ಸಭೆ ಸಾಕ್ಷಿಯಾಯಿತು.
ಸುಮಾರು ಎರಡು ಮೂರು ಗಂಟೆಗಳ ಕಾಲ ಸ್ವತಃ ಶಾಸಕ ಎಚ್.ಕೆ.ಪಾಟೀಲ್ ಅವರೇ ಕತ್ತಲಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಬುಧವಾರ ಗದಗ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನ ಸಭೆಯು ಗದಗ-ಬೆಟಗೇರಿ ನಗರಸಭೆಯ ಸಭಾಭವನದಲ್ಲಿ ನಡೆಯಿತು.
ಪದೇ ಪದೇ ವಿದ್ಯುತ್ ಕಡಿತದಿಂದಗಾಗಿ ಶಾಸಕ ಎಚ್.ಕೆ.ಪಾಟೀಲ ಅವರು ಸಮಸ್ಯೆ ಎದುರಿಸಿದರು.
ಕತ್ತಲಿಲ್ಲಿಯೇ ಕುಳಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಇನ್ನು, ಅಧಿಕಾರಿಗಳಂತು ಶಾಸಕರಿಗೆ ಕತ್ತಲು ಕೋಣೆಯಲ್ಲಿಯೇ ನಿಂತುಕೊಂಡು ಮಾಹಿತಿ ನೀಡುತ್ತಿದ್ದರು. ಅದರಂತೆ, ತಾಪಂ ಸದಸ್ಯರು ಕಗ್ರಾಸ ಕತ್ತಲಲ್ಲಿ ಕುಳಿತುಕೊಂಡಿದ್ದರು. ನಗರಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿತ್ತು.
ಕೊನೆಗೆ ಎಚ್ಚೆತ್ತುಕೊಂಡ ನಗರಸಭೆ ಅಧಿಕಾರಿಗಳು ಸಭೆ ಪೂರ್ಣಗೊಳ್ಳುವ ಆಸುಪಾಸಿನಲ್ಲಿ ಸಭಾಭವನದಲ್ಲಿ ವಿದ್ಯುತ್ ದೀಪಗಳನ್ನು ಹಚ್ಚಿದರು.