ವಿಜಯಸಾಕ್ಷಿ ಸುದ್ದಿ, ಹೈದರಾಬಾದ್
Advertisement
ತೆಲಂಗಾಣದ ಕರೀಂನಗರ ಜಿಲ್ಲೆಯ ಹಳ್ಳಿಯೊಂದರಲ್ಲಿ ಕೋವಿಡ್ ಟೆಸ್ಟಿಂಗ್ ವೇಳೆ ಅವಘಡವೊಂದು ನಡೆದಿದ್ದು, ಟೆಸ್ಟಿಂಗ್ ಗೆ ಬಳಸುವ ಸ್ವಾಬ್ ಸ್ಟಿಕ್ ವ್ಯಕ್ತಿಯ ಮೂಗಿನೊಳಗೆ ಮುರಿದುಬಿದ್ದಿದೆ.
ಹಳ್ಳಿಯ ಸರಪಂಚ್ ಜುವಾಜಿ ಶೇಖರ್ ಗ್ರಾಮದ ಜನರಿಗಾಗಿ ರ‌್ಯಾಪಿಡ್ ಆಂಟಿಜೆನ್ ಟೆಸ್ಟ್ ಕಾರ್ಯಕ್ರಮ ಆಯೋಜಿಸಿದ್ದರು. ಈ ವೇಳೆ ವ್ಯಕ್ತಿಯೊಬ್ಬ ತಾವೇ ಮೊದಲು ಪರೀಕ್ಷೆಗೆ ಒಳಗಾಗಿದ್ದರು. ಆಗ ಮೂಗಿನೊಳಗೆ ಸ್ಟಿಕ್ ಮುರಿದುಬಿದ್ದಿದ್ದು, ಅದನ್ನು ಹೊರತೆಗೆಯಲು ಸ್ಥಳೀಯ ವೈದ್ಯರು ವಿಫಲವಾಗಿದ್ದಾರೆ. ನಂತರ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಎಂಡೋಸ್ಕೊಪಿ ಮೂಲಕ ಆ ಸ್ವಾಬ್ ಸ್ಟಿಕ್ ಹೊರತೆಗೆಯಲಾಯಿತು. ವೈದ್ಯರಿಗೆ ಕೋವಿಡ್ ಟೆಸ್ಟ್ ಮಾಡುವ ಅನಭವದ ಕೊರತೆಯಿಂದ ಈ ಅನಾಹುತ ನಡೆದಿದೆ ಎಂದು ಚೇತರಿಕೆ ಬಳಿಕೆ ಆ ವ್ಯಕ್ತಿ ಆರೋಪಿಸಿದ್ದಾರೆ.