ವಿಜಯಸಾಕ್ಷಿ ಸುದ್ದಿ, ಮೈಸೂರು
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಗಳನ್ನು ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅವರು ಬೆಂಬಲಿಸಿದರು.
ಮೈಸೂರಿನಲ್ಲಿ ಈ ಕುರಿತು ಮಾತನಾಡಿರುವ ಅವರು, ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟಿಸುತ್ತಿರುವವರು ಕೇವಲ ಪಂಜಾಬಿ ರೈತರು ಮಾತ್ರ.
ಹಾಗಾಗಿ, ಅವರು ಇಡೀ ದೇಶದ ರೈತರನ್ನು ಪ್ರತಿನಿಧಿಸಿದಂತೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕೃಷಿ ಮಸೂದೆಯಲ್ಲಿ ರೈತರಿಗೆ ಅನುಕೂಲಕರವಾಗುವ ಅಂಶಗಳಿವೆ. ಈ ಹೋರಾಟದ ಹಿಂದೆ ಕಾಂಗ್ರೆಸ್, ಕಮ್ಯುನಿಸ್ಟ್ ರ ಕೈವಾಡವಿದೆ. ಅವರಿಗೆ ಪ್ರಧಾನಿ ಮೋದಿಯವರ ಜನಪ್ರಿಯತೆ ಸಹಿಸಲಾಗುತ್ತಿಲ್ಲ ಎಂದು ಬೈರಪ್ಪ ಕುಟುಕಿದರು.
ಗೋವಿಗೂ ನಮಗೂ ತಾಯಿ ಮಕ್ಕಳ ಸಂಬಂಧವಿದೆ. ಗೋವು ಅಹಿಂಸೆಯ ಪ್ರತೀಕ. ಚಿಕ್ಕಂದಿನಿಂದ ಎಲ್ಲರೂ ಗೋವಿನ ಹಾಲು ಕುಡಿದೇ ಬೆಳೆದಿದ್ದೇವೆ.
ವಯಸ್ಸಾದ ಮೇಲೆ ತಾಯಿಯನ್ನು ನಿರುಪಯುಕ್ತವೆಂದು ಹೇಳಲಾಗುವುದೇ ಎಂದು ಪ್ರಶ್ನಿಸಿದ ಅವರು, ಗೋವು ಟೀಕಿಸುವವರು ಮೂಲಭೂತ ಜ್ಞಾನ ಇಲ್ಲದವರು ಎಂದು ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿರುವುದನ್ನು ಸಮರ್ಥಿಸಿಕೊಂಡರು.
ಹನುಮಂತ ಗುಲಾಮಗಿರಿಯ ಸಂಕೇತ. ಮಾಜಿ ಸಿದ್ದರಾಮಯ್ಯ ಹನುಮ ಜಯಂತಿಯನ್ನೇ ಪ್ರಶ್ನೆ ಮಾಡಿದ್ದಾರೆ. ಇದು ನಾನು ಉತ್ತರ ಕೊಡಲು ಲಾಯಕ್ಕೇ ಇಲ್ಲದ ವಿಚಾರ. ಹಾಗಾಗಿ ಅಂತಹವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಹಿರಿಯ ಸಾಹಿತಿ ಎಸ್.ಎಲ್.ಬೈರಪ್ಪ
ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.