ಸಿಎಂ ಸ್ಥಾನಕ್ಕೆ ಖರ್ಗೆ ಹೆಸ್ರು ತಿರಸ್ಕರಿಸಿದ್ದು ನಾನಲ್ಲ, ಅವರಿಗೆ ಗೊತ್ತಿದ್ದರೆ ತಿರಸ್ಕರಿದವ್ರ ಹೆಸ್ರು ಹೇಳಲಿ; ಮಾಜಿ ಪ್ರಧಾನಿಗೆ ಸವಾಲೆಸೆದ ಮಾಜಿ ಸಿಎಂ

0
Spread the love

ವಿಜಯಸಾಕ್ಷಿ ಸುದ್ದಿ, ಮೈಸೂರು/ವರುಣಾ

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸ್ವಗ್ರಾಮ ವರುಣಾ ಹೋಬಳಿಯ ಸಿದ್ದರಾಮಯ್ಯನಹುಂಡಿ ಸರ್ಕಾರಿ ಶಾಲೆ ಮತಗಟ್ಟೆ ಸಂಖ್ಯೆ 138ರಲ್ಲಿ‌ ಮತ ಚಲಾಯಿಸಿದರು.

ಮತದಾನಕ್ಕೂ ಮುನ್ನ ಗ್ರಾಮ ದೇವರಾದ ಸಿದ್ದರಾಮೇಶ್ವರ ದೇವಾಲಯಕ್ಕೆ ಸಿದ್ದರಾಮಯ್ಯ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆಯೇ ಬೆಂಬಲಿಗರು ಸುತ್ತುವರೆದರೆ, ಅಭ್ಯರ್ಥಿಗಳು ಕರಪತ್ರ ನೀಡಿ ಮತ ಹಾಕುವಂತೆ ಮನವಿ ಮಾಡಿದರು.

ಬಳಿಕ ಮಾತನಾಡಿದ ಅವರು, ಸಿದ್ದರಾಮಯ್ಯ ಜೆಡಿಎಸ್ ಪಕ್ಷ ಕಟ್ಟಿಲ್ಲ ಎಂಬ ಮಾಜಿ ಪ್ರಧಾನಿ ದೇವೇಗೌಡರ ಹೇಳಿಕೆಗೆ, ದೇವೇಗೌಡರು ಪಾಪ ಎಂದು ಮರುಗಿದರು. 1999ರಲ್ಲಿ ಜೆಡಿಎಸ್ ಅಧ್ಯಕ್ಷರಾಗಿದ್ದು ಯಾರು?
6 ವರ್ಷಗಳ ಕಾಲ‌ ಜೆಡಿಎಸ್ ಅಧ್ಯಕ್ಷನಾಗಿದ್ದು ನಾನು?
ಹಾಗಾದರೆ, ನಾನು ಅಧ್ಯಕ್ಷನಾಗಿದ್ದು ವ್ಯರ್ಥನಾ? ಎಂದು ದೇವೇಗೌಡರನ್ನು ಪ್ರಶ್ನಿಸಿದರು.

ಸಿಎಂ ಸ್ಥಾನಕ್ಕೆ ಖರ್ಗೆ ಹೆಸರು ತಿರಸ್ಕರಿಸಿದ್ದು ನಾನಂತೂ ಅಲ್ಲ. ನ‌ನಗೆ ಯಾರೆಂಬುದೂ ಗೊತ್ತಿಲ್ಲ. ಅವರಿಗೆ ಖರ್ಗೆ ಹೆಸರು ತಿರಸ್ಕಾರ ಮಾಡಿದವರ ಹೆಸರು ಗೊತ್ತಿದ್ದರೆ ಹೇಳಲಿ.  ಸಿದ್ದರಾಮಯ್ಯ, ವಿಪಕ್ಷ ನಾಯಕ


Spread the love

LEAVE A REPLY

Please enter your comment!
Please enter your name here