ವಿಜಯಸಾಕ್ಷಿ ಸುದ್ದಿ, ಲಕ್ನೋ
ದೇಶದಲ್ಲಿ ಮತ್ತೊಂದು ಆತಂಕ ಶುರುವಾಗಿದೆ ಉತ್ತರ ಪ್ರದೇಶದಲ್ಲಿ ನೀರಿನಲ್ಲಿ ಕೊರೊನಾ ಸೋಂಕ ಪತ್ತೆಯಾಗಿದ್ದು, ಆತಂಕ ಮನೆ ಮಾಡುತ್ತಿದೆ. ಉತ್ತರ ಪ್ರದೇಶದ ಗಂಗಾ ನದಿಯಲ್ಲಿ ಶವಗಳು ತೇಲಿ ಬಂದ ಹಿನ್ನೆಲೆಯಲ್ಲಿ ನೀರನ್ನು ಪರೀಕ್ಷೆಗೆ ಒಳಪಡಿಸಬೇಕೆಂಬ ಕೂಗು ಕೇಳಿ ಬಂದಿತ್ತ. ಐಸಿಎಂಆರ್ ಮತ್ತು ಡಬ್ಲ್ಯೂ ಎಚ್ ಓ ಕೆಲವು ಪ್ರದೇಶದ ನೀರನ್ನು ಮಾದರಿಯಾಗಿ ತೆಗೆದುಕೊಂಡು ಪರೀಕ್ಷೆಗೆ ಒಳಪಡಿಸಲಾಗಿತ್ತು.
ಕೊಳಚೆ ನೀರನ್ನು ಕೂಡ ಪರೀಕ್ಷೆಗೆ ಒಳಪಡಿಸಲಾಗಿತ್ತು. ಮೊದಲ ಹಂತದಲ್ಲಿ ಲಕ್ನೋ ನಗರದ ಮೂರು ಪ್ರದೇಶಗಳ ಕೊಳಚೆ ನೀರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ ಒಂದು ಸ್ಥಳದ ನೀರಿನಲ್ಲಿ ಕೊರೊನಾ ವೈರಸ್ ಕಂಡು ಬಂದಿದೆ ಎಂದು ಪಿಜಿಐ ಮೈಕ್ರೋಬಯೋಲಾಜಿ ವಿಭಾಗದ ಅಧ್ಯಕ್ಷ ಉಜ್ಜವಲಾ ಘೋಷಾಲ್ ಖಚಿತ ಪಡಿಸಿದ್ದಾರೆ.
ಲಕ್ನೋ ನಗರದ ಖಾದ್ರಾ, ಮೀನುಗಾರರ ಬಡವಾಣೆ, ಗಡಿಯಾರ ಗೋಪುರ ಬಡಾವಣೆಯಲ್ಲಿಯ ಕೊಳಚೆ ನೀರು ಸಂಗ್ರಹಿಸಲಾಗಿತ್ತು. ಪರೀಕ್ಷೆಯಲ್ಲಿ ಒಂದು ಮಾದರಿ ನೀರಿನಲ್ಲಿ ಕೊರೊನಾ ವೈರಸ್ ಕಂಡು ಬಂದಿದೆ ಎಂದು ಘೋಷಾಲ್ ತಿಳಿಸಿದ್ದಾರೆ.
ಜನರ ಮಲದಿಂದಾಗಿ ನೀರಿನಲ್ಲಿ ಕೊರೊನಾ ವೈರಸ್ ಕಂಡು ಬಂದಿರುವ ಸಾಧ್ಯತೆಗಳಿವೆ. ಹೋಮ್ ಐಸೋಲೇಟ್ ನಲ್ಲಿರುವ ಸೋಂಕಿತರು ಬಳಿಸಿರುವ ಶೌಚಾಲಯದಿಂದ ವೈರಸ್ ಚರಂಡಿ ಸೇರ್ಪಡೆಯಾಗುತ್ತಿದೆ. ಈ ಕುರಿತು ಹಲವು ದೇಶಗಳಲ್ಲಿ ಸಂಶೋಧನೆ ಸಹ ನಡೆಸಲಾಗುತ್ತಿದೆ. ಮಲ ಸೋಂಕಿನಿಂದಲೇ ಅರ್ಧದಷ್ಟು ಜನರು ಸೋಂಕಿಗೆ ತುತ್ತಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಕೊರೊನಾ ಮಾರ್ಗಸೂಚಿ ಪಾಲಿಸಿ ಎಂದು ವೈದ್ಯರು ಹೇಳುತ್ತಿದ್ದಾರೆ.