
ವಿಜಯಸಾಕ್ಷಿ ಸುದ್ದಿ, ಗದಗ: ಅಬಕಾರಿ ದಾಳಿ, ಮದ್ಯ ಅಕ್ರಮ ಮಾರಾಟ ಹತ್ತಿಕ್ಕುವ ಪೊಲೀಸರ ಯತ್ನ ಇದ್ದದ್ದೇ. ದೊಡ್ಡ ಮಿಕಗಳನ್ನು ಹಿಡಿದರೆ, ಪ್ರಶಂಸೆ ಮಾಡಬಹುದು. ಆದರೆ ಮುಂಡರಗಿ ತಾಲೂಕಿನ ಡಂಬಳದಲ್ಲಿ ಇತ್ತೀಚೆಗೆ ನಡೆದದ್ದೇ ಬೇರೆ!
Advertisement
ಡಂಬಳ ಗ್ರಾಮದ ಅಂಬೇಡ್ಕರ್ ಭವನದ ಬಳಿ ಇರುವ ಮಹೇಶ ಮೈಲಪ್ಪ ಹರಿಜನ ಎಂಬಾತನ ಮನೆಯಲ್ಲಿ ಅಕ್ರಮವಾಗಿ 5.94 ಲೀಟರ್ ಮಧ್ಯವನ್ನು (ಅಂದಾಜು ಮೌಲ್ಯ 2,319 ರೂಪಾಯಿ) ಮಾರಾಟದ ಉದ್ದೇಶಕ್ಕಾಗಿ ಸಂಗ್ರಹಿಸಿರುವ ಮಾಹಿತಿ ಮೇರೆಗೆ ದಾಳಿ ನಡೆಸಿ, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಒಬ್ಬ ಆರೋಪಿಯನ್ನು ಹಿಡಿಯಲು ಅಬಕಾರಿ ಇಲಾಖೆ ಅಧಿಕಾರಿಗಳ ದಂಡೇ ಹೋಗಿದ್ದು ಗುಡ್ಡ ಅಗೆದು ಇಲಿ ಹಿಡಿದಂತೆ ಎನ್ನುವಂತಾಗಿದೆ. ಸಾಲದ್ದಕ್ಕೆ ಮಹಾನ್ ಸಾಧನೆ ಮಾಡಿದಂತೆ ಅಧಿಕಾರಿಗಳು ಆರೋಪಿಯನ್ನು ಮುಂದೆ ಕುಳ್ಳಿರಿಸಿ ಫೋಟೋ ಪೋಸ್ ಕೊಟ್ಟು ನಗೆಪಾಟಲಿಗೆ ಒಳಗಾಗಿದ್ದಾರೆ.