ವಿಜಯಸಾಕ್ಷಿ ಸುದ್ದಿ, ಬೀದರ್
ಸಮಾಜ ತಿದ್ದಿ, ತೀಡಿ ಮಾದರಿಯಾಗಬೇಕಿದ್ದ ಶಿಕ್ಷಕರೇ ಇಲ್ಲಿ ಆರೋಪಿಯಾಗಿದ್ದಾರೆ. ವೃದ್ಧೆಯ ಮೇಲೆ ಹಲ್ಲೆ ನಡೆಸಿ ಇಡೀ ಸಮಾಜವೇ ತಲೆ ತಗ್ಗಿಸುವಂತ ಕೆಲಸ ಮಾಡಿದ್ದಾರೆ. ಸರ್ಕಾರಿ ಶಾಲಾ ಶಿಕ್ಷಕ ಹಾಗೂ ಅವರ ಪತ್ನಿ ವೃದ್ಧೆಯ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.
ಜಿಲ್ಲೆ ಔರಾದ್ ತಾಲೂಕಿನ ಗಡಿಕೂಸನೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ದೈಹಿಕ ಶಿಕ್ಷಕ ದಿಗಂಬರ್ ಹಾಗೂ ಆತನ ಪತ್ನಿ ಗ್ರಾಪಂ ಸದಸ್ಯೆ ಶಾರದ ಎಂಬುವವರು ಸೇರಿಕೊಂಡು ವೃದ್ದೆಯ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿ ದರ್ಪ ಮೆರೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕ್ಷುಲಕ್ಕ ಕಾರಣಕ್ಕೆ ಮನೆಯ ಪಕ್ಕದ ವಯೋವೃದ್ದೆ ಸಿದ್ದಮ್ಮ ಎಂಬುವವರು ಮೇಲೆ ಈ ಶಿಕ್ಷಕ ಹಾಗೂ ಪತ್ನಿ ದರ್ಪೆ ಮೆರೆದಿದ್ದಾರೆ. ಘಟನೆಯಲ್ಲಿ ಹಲ್ಲೆಗೆ ಒಳಗಾದ ವಯೋವೃದ್ಧೆ ಸಿದ್ದಮ್ಮ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ಸಂತಪೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಅಲ್ಲದೇ, ಆರೋಪಿಗಳ ವಿರುದ್ಧ ಸೆಕ್ಷನ್ 341, 323, 504 ಹಾಗೂ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಶಿಕ್ಷಕ ಹಾಗೂ ಗ್ರಾಪಂ ಸದಸ್ಯೆಯ ಈ ವರ್ತನೆಗೆ ಗ್ರಾಮದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.