ರಾಜಕೀಯ ದ್ವೇಷ ಆಹಾರ ಮೇಲೆ ಸಲ್ಲದು; ತಾಹೇರ್ ಹುಸೇನ್ ಕಿಡಿ

0
Spread the love

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

Advertisement

ಇತ್ತೀಚಿಗೆ ವಿರೋಧ ಪಕ್ಷದ ನಾಯಕರು ಜನರ ಸಮಸ್ಯೆಗಳು ಆಲಿಸಲಿಕ್ಕೆ ಹೋದಾಗ ಬಿಜೆಪಿ ಕಾರ್ಯಕರ್ತರು ಅವರ ವಾಹನದ ಮೇಲೆ ಮೊಟ್ಟೆ ಎಸೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಎಲ್ಲಾ ಹಕ್ಕು ಇದೆ ಆದರೆ ಹಾಗಂತ ಬಡವರ ಆಹಾರದ ಅವಮಾನ ಮಾಡುವ ಹಕ್ಕು ಯಾರಿಗೂ ಇಲ್ಲ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷರು ತಾಹೇರ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನ ಕೆಜಿ ಹಳ್ಳಿಯ ಶಾಂಪುರದ ಬಡ ಕುಟುಂಬಗಳಿಗೆ ಮೊಟ್ಟೆ ವಿತರಿಸಿ ಮೊಟ್ಟೆ ವ್ಯರ್ಥ ಮಾಡುವ ಕ್ರಮ ವನ್ನು ಅವರು ಖಂಡಿಸಿದರು.ಆಕ್ರೋಶ ವ್ಯಕ್ತಪಡಿಸಲಿಕ್ಕೆ ಬೇರೆ ಬೇರೆ ವಿಧಾನಗಳಿವೆ ಯಾರು ಕೂಡ ಬಡವರ ಆಹಾರ ರಸ್ತೆಗೆ ಚಲ್ಲಿ ಅವಮಾನ ಮಾಡಬಾರದು ಎಂದು ಹೇಳಿದರು.

ರಾಜ್ಯದಲ್ಲಿ ಈಗಾಗಲೇ 3 ಲಕ್ಷಕಿಂತ ಹೆಚ್ಚು ಮಕ್ಕಳು ಅಪೌಷ್ಟಿಕತೆ ಯಿಂದ ಬಳಲುತ್ತಿದ್ದಾರೆ, ಸರಕಾರ ಮೊಟ್ಟೆ ಒಂದು ಪೌಷ್ಟಿಕ ಆಹಾರ ಎಂದು ಪರಿಗಣಿಸಿ ಅದರ ವಿತರಣೆ ಮಾಡುವ ಕಾರ್ಯಕ್ರಮ ಮಾಡುತ್ತಿದೆ ಆದರೂ ಅರ್ಹ ಮಕ್ಕಳಿಗೆ ಸರಿಯಾದ ಸಮಯಕ್ಕೆ ಅದು ಲಭ್ಯವಾಗುತ್ತಿಲ್ಲ ಇಂಥ ಸಂಧರ್ಭದಲ್ಲಿ ಈ ರೀತಿ ಮೊಟ್ಟೆ ರಸ್ತೆಗೆ ಚೆಲ್ಲಿ ವ್ಯರ್ಥ ಮಾಡುವುದು ಅತ್ಯಂತ ಖಂಡನೀಯ ಎಂದು ಅವರು ಅಭಿಪ್ರಾಯ ಪಟ್ಟರು.

ರಾಜಕೀಯ ಪಕ್ಷಗಳು ತಮ್ಮ ಕಾರ್ಯಕರ್ತರ ಈ ರೀತಿಯ ವರ್ತನೆಗಳನ್ನು ಗಂಭೀರವಾಗಿ ತೆಗೆದು. ಕೊಳ್ಳುತ್ತಾ ಇಂಥ ಕೃತ್ಯ ಎಸಗುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.


Spread the love

LEAVE A REPLY

Please enter your comment!
Please enter your name here