ರೈತ ಕೂಡ ಕೋಟಿ ಲೆಕ್ಕದಲ್ಲಿ ಮಾತನಾಡುವ ಸಮಯ ಬರಲಿ

0
Spread the love

ಕೃಷಿ ಸಾಧಕಿ ಕವಿತಾ ಉಮಾಶಂಕರ ಮಿಶ್ರಾ ಹೇಳಿಕೆ

Advertisement

ವಿಜಯಸಾಕ್ಷಿ ಸುದ್ದಿ, ನರಗುಂದ

ಕೇವಲ ಇಂಜಿನಿಯರ್, ಡಾಕ್ಟರ್, ಲಾಯರ್ ಮಾತ್ರ ಕೋಟಿ ಲೆಕ್ಕದಲ್ಲಿ ಮಾತಾಡುವುದಲ್ಲ, ಒಬ್ಬ ರೈತ ಕೂಡ ಕೋಟಿ ಲೆಕ್ಕದಲ್ಲಿ ಮಾತಾಡಬೇಕು. ಜಗತ್ತಿನಲ್ಲಿ ಎಲ್ಲ ಇಲ್ಲದಿದ್ದರೂ ಜಗತ್ತು ನಡೆಯುತ್ತದೆ. ಆದರೆ ರೈತ ಇಲ್ಲದಿದ್ದರೆ ಜಗತ್ತೇ ನಿಂತು ಹೋಗುತ್ತದೆ.‌ ರೈತ ದೇಶದ ಬೆನ್ನೆಲುಬು ಅಲ್ಲ ಜಗತ್ತಿನ ಬೆನ್ನೆಲುಬು ಎಂದು ಕೃಷಿ ಸಾಧಕಿ ಕವಿತಾ ಉಮಾಶಂಕರ ಮಿಶ್ರಾ ಹೇಳಿದರು.

ನರಗುಂದ ತಾಲ್ಲೂಕಿನ ಶಿರೋಳ ಗ್ರಾಮದ ಶ್ರೀ ಯಚ್ಚರಸ್ವಾಮಿಗಳು ಗವಿಮಠದ ಅಜ್ಜನ ಜಾತ್ರೆ ಅಂಗವಾಗಿ ರೈತ ಮತ್ತು ಸೈನಿಕ ಹಿತಚಿಂತನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಹೆಣ್ಣು ಸೃಷ್ಟಿಯ ಸಂಕೇತ. ನಿಮ್ಮಿಂದ ಅಸಾಧ್ಯವಾದುದು ಯಾವುದೂ ಇಲ್ಲ.‌ ನೀವು ಎಲ್ಲವನ್ನೂ ಸಾಧಿಸಬಲ್ಲಿರಿ‌ ಎಂದು ಮಹಿಳೆರಿಗೆ ಸ್ಫೂರ್ತಿ ತುಂಬಿದರು.

ಸಾವಯವ ಗೊಬ್ಬರ ಬಳಸಿ ಬೆಳೆ ಬೆಳೆಯುವ 100ಕ್ಕೂ ಹೆಚ್ಚು ರೈತರು ಮತ್ತು ಗಡಿಯಲ್ಲಿ ಸೇವೆ ಸಲ್ಲಿಸಿದ 100 ಕ್ಕೂ ಹೆಚ್ಚು ಸೈನಿಕರಿಗೆ ಪಾದಪೂಜೆ ಮಾಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಅಭಿನವ ಯಚ್ಚರಸ್ವಾಮಿಗಳು, ಕಿತ್ತಲಿಯ ಮಂಜುನಾಥ ಸ್ವಾಮಿಗಳು, ಯರಗಟ್ಟಿ ಶ್ರೀ ಗಣಪತಿ ಮಹಾರಾಜರು ಹಾಗೂ ಸೈನಿಕರ ಸಂಘದ ರಾಜ್ಯಾಧ್ಯಕ್ಷ, ಜಾತ್ರಾ ಕಮಿಟಿ ಗೌರವಾಧ್ಯಕ್ಷ ಗುರುಬಸಯ್ಯ ನಾಗಲೋಟಿಮಠ, ಅಧ್ಯಕ್ಷ ಲಾಲಸಾಬ ಅರಗಂಜಿ, ಉಪಾಧ್ಯಕ್ಷ ಶಿವಾನಂದ ಯಲಿಬಳ್ಳಿ, ಕಾರ್ಯದರ್ಶಿ ಪ್ರವೀಣ ವೀ ಸಂಗಳದ ಶೆಟ್ಟರ್, ಸಹ ಕಾರ್ಯದರ್ಶಿ ಬಾಲಪ್ಪ ಮೂಲಿಮನಿ ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here