ವಿಜಯಸಾಕ್ಷಿ ಸುದ್ದಿ, ವಿಜಯಪುರ
Advertisement
ಕೊರೋನಾ ಸೋಂಕಿಗೆ ವಿಜಯಪುರದಲ್ಲಿ ಇದೇ ಮೊದಲ ಬಾರಿಗೆ 2 ವರ್ಷದ ಮಗುವೊಂದು ಸಾವನ್ನಪ್ಪಿರುವ ವರದಿಯಾಗಿದೆ.
ನಗರದ ಶಹ್ಪೇಟ್‌ನಲ್ಲಿ 2 ವರ್ಷದ ಮಗು ತೀವ್ರ ಜ್ವರದಿಂದ ಕೆಲ ದಿನಗಳ ಹಿಂದಷ್ಟೇ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕಳೆದ ವಾರ ಮೃತಪಟ್ಟಿತ್ತು ಎಂದು ಹೇಳಲಾಗಿದೆ.
ಆಗಸ್ಟ್ 14 ರಂದು ಹೆಣ್ಣು ಮಗುವಿನಲ್ಲಿ ಕೋವಿಡ್ ಸೋಂಕು ದೃಢಪಟ್ಟಿತ್ತು. ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸೂಕ್ತ ಪ್ರತಿಕ್ರಿಯೆ ಸಿಗದೆ ಆಗಸ್ಟ್ 24 ರಂದು ಮಗು ಸಾವನ್ನಪ್ಪಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಜಯಪುರದಲ್ಲಿ ಈ ವರೆಗೆ ಸಾಕಷ್ಟು ಮಕ್ಕಳಿಗೆ ಕೋವಿಡ್ ಸೋಂಕು ತಗುಲಿದೆ. ಆದರೆ, ಮಗುವೊಂದು ಸೋಂಕಿಗೆ ಬಲಿಯಾಗಿರುವುದು ಇದೇ ಮೊದಲಾಗಿದೆ.