ನುಡಿದಂತೆ ನಡೆದ ದಿವ್ಯ ಪುರುಷ ಬಸವಣ್ಣ : ಎಂ.ಎಸ್. ಹೊಟ್ಟಿನ

0
1819th monthly Shivanubhava
Spread the love

ವಿಜಯಸಾಕ್ಷಿ ಸುದ್ದಿ, ಮುಂಡರಗಿ : ನಮ್ಮ ಬದುಕಿಗೆ ಬೇಕಾಗುವ ಆದರ್ಶ ಮೌಲ್ಯಗಳನ್ನು ಬಸವಾದಿ ಶರಣರ ವಚನ ಸಾಹಿತ್ಯದಿಂದ ಪಡೆಯಬಹುದಾಗಿದೆ. ದಾರ್ಶನಿಕರ, ಅನುಭಾವಿಗಳ, ಪೂಜ್ಯರ ಆದರ್ಶ ವಿಚಾರಗಳನ್ನು ಪಡೆದುಕೊಂಡು ಸುಂದರ ಜೀವನ ನಮ್ಮದಾಗಿಸಿಕೊಳ್ಳಬೇಕು ಎಂದು ನಿವೃತ್ತ ಪ್ರಾಚಾರ್ಯ ಎಂ.ಎಸ್. ಹೊಟ್ಟಿನ ಹೇಳಿದರು.

Advertisement

ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ನಡೆದ 1819ನೇ ಮಾಸಿಕ ಶಿವಾನುಭವದಲ್ಲಿ ಅವರು ಮಾತನಾಡಿದರು.

ಬಸವಣ್ಣನವರು 12ನೇ ಶತಮಾನದಲ್ಲಿ ಹೊಸ ಮನ್ವಂತರವನ್ನು ಸೃಷ್ಟಿ ಮಾಡಿದರು. ಸಮುದಾಯದಲ್ಲಿ ಆತ್ಮಗೌರವ, ಆತ್ಮವಿಶ್ವಾಸಗಳ ಜೀವನ ಪ್ರಜ್ಞೆಯನ್ನು ಅರಳಿಸಿದರು. ಮಾನವ ಸಮಾಜದಲ್ಲಿ ಮನೆ ಮಾಡಿಕೊಂಡಿದ್ದ ಕೀಳರಿಮೆಗಳನ್ನು ಕಿತ್ತು ಹಾಕಿ ಸಮಾನತೆಯನ್ನು ಸಾಧಿಸಲು ಶ್ರಮಿಸಿದರು. ನುಡಿದಂತೆ ನಡೆದು ಲೋಕದ ಹಿತವನ್ನು ಬಯಸಿದ ದಿವ್ಯ ಪುರುಷ ಎಂದರು.

ನೇತೃತ್ವ ವಹಿಸಿದ್ದ ಶ್ರೀಮಠದ ಉತ್ತರಾಧಿಕಾರಿ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ತಂದೆ-ತಾಯಿ ತಮ್ಮ ಮಕ್ಕಳಿಗೆ ಸಾಕಷ್ಟು ಹಣ ಖರ್ಚು ಮಾಡಿ ಶಿಕ್ಷಣವನ್ನು ನೀಡುತ್ತಾರೆ. ಆದರೆ ಸರಿಯಾಗಿ ಸಂಸ್ಕಾರ, ಸಂಸ್ಕೃತಿ ಕಲಿಸುವುದಿಲ್ಲ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ, ಸಂಸ್ಕೃತಿ ಕಲಿಸುವುದು ಮುಖ್ಯ ಎಂದರು.

ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ ಆಗಿರುವ ಆರ್‌ಎಫ್‌ಒ ವೀರೇಂದ್ರ ಮರಿಬಸಣ್ಣವರ ಅವರನ್ನು ಶ್ರೀಮಠದಿಂದ ಸನ್ಮಾನಿಸಿ ಗೌರವಿಸಲಾಯಿತು.

ಜಗದ್ಗುರು ಅನ್ನದಾನೀಶ್ವರ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕರು ಸಿಬ್ಬಂದಿ ಭಕ್ತಿಸೇವೆ ವಹಿಸಿಕೊಂಡಿದ್ದರು. ಶ್ರೀ ಚನ್ನಬಸವ ದೇವರು ಉಪಸ್ಥಿತರರು ಇದ್ದರು. ಜಗದ್ಗುರು ಅನ್ನದಾನೀಶ್ವರ ಅಕ್ಕನ ಬಳಗದವರು ಸಂಗೀತ ಸೇವೆ ಸಲ್ಲಿಸಿದರು. ಮುಖ್ಯ ಶಿಕ್ಷಕ ಎಸ್.ಎಸ್. ಇನಾಮತಿ ಕಾರ್ಯಕ್ರಮ ನಿರೂಪಿಸಿದರು.


Spread the love

LEAVE A REPLY

Please enter your comment!
Please enter your name here