ಆತ್ಮದ ಅರಿವು ನೀಡುವ ಗ್ರಂಥ ಭಗವದ್ಗೀತೆ : ಡಾ.ಪಾವಗಡ ಪ್ರಕಾಶರಾವ್

0
2nd day lecture on Bhagavad Gita discourse
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಹಿಂದೂಗಳ ಪವಿತ್ರ ಗ್ರಥ ಶ್ರೀಮದ್ ಭಗವದ್ಗೀತೆಯು ಆತ್ಮದ ಅರಿವು ನೀಡುವ ಮಹಾನ್ ಗ್ರಂಥವಾಗಿದೆ ಎಂದು ಪ್ರವಚನ ಭಾಸ್ಕರ ಡಾ.ಪಾವಗಡ ಪ್ರಕಾಶರಾವ್ ಹೇಳಿದರು.

Advertisement

ಅವರು ಕುಮಾರವ್ಯಾಸ ಪ್ರವಚನ ಸಂಚಾಲನ ಸಮಿತಿ ಏರ್ಪಡಿಸಿರುವ ಭಗವದ್ಗೀತಾ ಪ್ರವಚನದ 2ನೇ ದಿನದ ಉಪನ್ಯಾಸ ನೀಡುತ್ತಿದ್ದರು.

ಭಗವದ್ಗೀತೆಯ ಕುರಿತು ಪ್ರಥಮ ಭಾಷ್ಯ ಬರೆದವರು ಜಗದ್ಗುರು ಆದಿ ಶಂಕರಾಚಾರ್ಯರು. ಅವರು ಭಗವದ್ಗೀತೆಯ ಆಧಾರದ ಮೇಲೆ ಶಾಶ್ವತ ತತ್ವವಾದ ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದರು. ಅಂತ್ಯಜನಿರಲಿ ಅಥವಾ ಸನ್ಯಾಸಿಯೇ ಇರಲಿ ಆತ್ಮವು ಪ್ರತಿಯೊಬ್ಬರಲ್ಲಿ ಒಂದೇ. ಮನುಷ್ಯರಲ್ಲಿ ಭೌತಿಕ ವ್ಯತ್ಯಾಸಗಳಿರುತ್ತವೆ.

ಆದರೆ ಆತ್ಮಾನುಭೂತಿ ಒಂದೇ ಆಗಿರುತ್ತದೆ. ಶ್ರೀ ಶಂಕರರ ಪ್ರಸಿದ್ಧ ಶ್ಲೋಕವಾದ `ಮನೀಷ ಪಂಚಕ`ದ ಪ್ರಕಾರ ಸುಶುಪ್ತಿ, ಜಾಗೃತ ಮತ್ತು ಸ್ವಪ್ನ ಅವಸ್ಥೆಯಲ್ಲಿ ಎಲ್ಲ ಉಪಾದಿಗಳನ್ನು ದೂರವಾಗಿರಿಸಿಕೊಂಡು ವ್ಯಕ್ತಿಯಲ್ಲಿ ಶಾಶ್ವತವಾಗಿರುವುದು ಆತ್ಮ ಮಾತ್ರವೇ. ಇದನ್ನು ಅರ್ಥಮಾಡಿಕೊಂಡವರನ್ನೇ ಗುರು ಎಂದು ಹೇಳಲಾಗುತ್ತದೆ.

ಎರಡನೇ ದಿನದ ಭಕ್ತಿಸೇವೆಯನು ಪಿ.ಡಬ್ಲು.ಡಿ ಗುತ್ತಿಗೆದಾರರಾದ ಆಂಜನೇಯ ಕಟಗಿ ವಹಿಸಿದ್ದರು. ಡಾ.ಕಲ್ಲೇಶ ಮೂರಶಿಳ್ಳಿನ ನಿರೂಪಿಸಿ ವಂದಿಸಿದರು. ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಗುರಣ್ಣ ಬಳಗಾನೂರ, ಡಾ. ಜಿ.ಬಿ ಪಾಟೀಲ, ಅನಿಲ ವೈದ್ಯ, ವಾದಿರಾಜ ರಾಯ್ಕರ, ಡಾ. ಎಸ್.ಡಿ ಯರಿಗೇರಿ, ಡಾ. ವಿಜಯದತ್ತ ಮಂಗಸೂಳಿ, ಗೋಪಾಲಕೃಷ್ಣ ತಾಸಿನ, ಶಶಿಧರ ಮೂರಶಿಳ್ಳಿನ, ಅನಿಲ ತೆಂಬದಮನಿ, ಗೌರಪ್ಪ ಬೊಮ್ಮಣ್ಣನವರ, ಬಿ.ವಿ. ಹಿರೇಮಠ, ಡಾ. ದತ್ತಪ್ರಸನ್ನ ಪಾಟೀಲ ಸೇರಿದಂತೆ ಅನೇಕ ಭಕ್ತರು ಪಾಲ್ಗೊಂಡಿದ್ದರು.

ಆತ್ಮವು ಆಕಾಶ ಅಥವಾ ನಿರ್ವಲಯದಿಂದ ವ್ಯಕ್ತಿಯ ಒಳಗೆ ಪ್ರವೇಶಿಸುತ್ತದೆ. ಅದು ಪ್ರಾಣವಾಯುವಾಗಿ ಅವನಿಗೆ ಜೀವದಾನ ನೀಡುತ್ತದೆ. ವ್ಯಕ್ತಿಯು ಮೃತನಾದಾಗ ಪ್ರಾಣವು ಅವನನ್ನು ತ್ಯಜಿಸಿ ಮತ್ತೆ ಆಕಾಶ ಅಥವಾ ಅವಕಾಶದಲ್ಲಿ ಲೀನವಾಗುತ್ತದೆ. ಇಂಥ ಆಕಾಶತತ್ವವನ್ನೇ ಶ್ರೀ ಶಂಕರಾಚಾರ್ಯರು ಪರಬ್ರಹ್ಮ ಅಥವಾ ಭಗವಂತ ಎಂದು ಪ್ರತಿಪಾದಿಸಿದರು. ಹೀಗೆ ಭಗವದ್ಗೀತೆಯ ಆಧಾರದ ಮೇಲೆ ಸರ್ವರಲ್ಲಿ ಇರುವ ಆತ್ಮ ಒಂದೇ, ಹೀಗಾಗಿ ಸರ್ವರೂ ಸಮಾನರು ಎಂಬ ತಾತ್ವಿಕ ಏಕತೆಯನ್ನು ಶಂಕರರು ಪ್ರತಿಪಾದಿಸಿದರು. ಹಾಗೂ `ಅಹಂ ಬ್ರಹ್ಮಾಸ್ಮಿ` ಎಂದು ಹೇಳಿದರು. ಪ್ರತಿಯೊಬ್ಬರೂ ಪರಮಾದ್ಭುತ ಗ್ರಂಥವಾದ ಭಗವದ್ಗೀತೆಯನ್ನು ಅಧ್ಯಯನ-ಪಾರಾಯಣ ಮಾಡಬೇಕೆಂದು ಪಾವಗಡ ಪ್ರಕಾಶರಾವ ತಮ್ಮ ಪ್ರವಚನದಲ್ಲಿ ನುಡಿದರು.


Spread the love

LEAVE A REPLY

Please enter your comment!
Please enter your name here