ನಿರುದ್ಯೋಗ ನಿವಾರಣೆಗೆ ಅಗತ್ಯ ಕ್ರಮ : ಡಾ. ಎಂ.ಸಿ. ಸುಧಾಕರ್

0
74th Annual Convocation Program
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ : ರಾಜ್ಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸರಕಾರ ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಹೇಳಿದರು.

Advertisement

ಅವರು ಮಂಗಳವಾರ ಬೆಳಿಗ್ಗೆ ವಿಶ್ವವಿದ್ಯಾಲಯದ ಆವರಣದಲ್ಲಿರುವ ಗಾಂಧಿ ಭವನದಲ್ಲಿ ಆಯೋಜಿಸಲಾದ 74ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿವಿಧ ಕೈಗಾರಿಕೆಗಳ ನಿರೀಕ್ಷೆಗೆ ತಕ್ಕಂತೆ ವಿದ್ಯಾರ್ಥಿಗಳಿಗೆ ಕೌಶಲ್ಯಗಳನ್ನು ಕಲಿಸುವ ನಿಟ್ಟಿನಲ್ಲಿ ಸರಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಉದ್ಯೋಗಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಬಿಕಾಂ. ಪದವಿಯಲ್ಲಿ ಹೊಸ ನಾಲ್ಕು ವಿಭಾಗಗಳನ್ನು ತೆರಯಲಾಗಿದ್ದು, ಈಗಾಗಲೇ 1400 ವಿದ್ಯಾರ್ಥಿಗಳಿಗೆ ಪ್ರಶಿಕ್ಷಣಾರ್ಥಿ ಶಿಷ್ಯವೇತನ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಚಿದರಲ್ಲದೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಡಿಜಿಟಲ್ ಲೈಬ್ರರಿ ಆರಂಭಿಸುವಂತೆ ತಿಳಿಸಿದರು.

ವಿದ್ಯಾರ್ಥಿಗಳು ಆತ್ಮಸ್ಥೈರ್ಯದಿಂದ ಸವಾಲುಗಳನ್ನು ಎದುರಿಸಿ ಉನ್ನತ ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಚೇರಮನ್ ಪ್ರೊ. ಎಸ್.ಅಯ್ಯಪ್ಪನ್ ಮಾತನಾಡಿ, ಕಾಯಕವೇ ಕೈಲಾಸ ತತ್ವ ಪಾಲನೆಯ ಮೂಲಕ ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತವಾದುದನ್ನು ಸಾಧಿಸಬೇಕು ಎಂದು ಹೇಳಿದರು.

ಪ್ರವಾಹಗಳು ಮತ್ತು ಬರಗಾಲ, ಅಕಾಲಿಕ ಮಳೆ, ಭೂಕುಸಿತಗಳು, ತಾಪಮಾನ ಏರಿಕೆ ಹೆಚ್ಚು ಕಾಣುತ್ತಿದ್ದು, ವಿವಿಧ ಜೈವಿಕ ಮತ್ತು ಅಜೈವಿಕ ಒತ್ತಡಗಳು ಹಿಂದೆAದೂ ಕಂಡರಿಯದ ರೀತಿಯಲ್ಲಿ ಮನುಷ್ಯರನ್ನು ಬಾಧಿಸುತ್ತಿದೆ. ಬಹು ಆಯಾಮಗಳ, ನಾವೀನ್ಯಪೂರ್ಣ ವಿಧಾನಗಳು ಮತ್ತು ಪರಿಹಾರೋಪಾಯಗಳು ಇಂದಿನ ಅನಿವಾರ್ಯತೆಯಾಗಿದೆ ಎಂದರು.

ನಮ್ಮ ಕೃಷಿ ಸಮುದಾಯಗಳ ಅನ್ನದಾತರು ತಮ್ಮ ಸಮರ್ಪಣಾ ಮನೋಭಾವ ಮತ್ತು ಕಠಿಣ ಪರಿಶ್ರಮದಿಂದ ಇಡೀ ದೇಶದ ಹಸಿವನ್ನು ನೀಗಿಸುತ್ತಾ ಬಂದಿದ್ದಾರೆ. ಆಹಾರ ಭದ್ರತೆಯ ಭರವಸೆ ನೀಡಿರುವುದಲ್ಲದೆ, ದೇಶವನ್ನು ಇನ್ನಷ್ಟು ಬಲಿಷ್ಠ ಹಾಗೂ ಪ್ರಕಾಶಮಾನವಾಗಿಸಿದ್ದಾರೆ. ನಮ್ಮ ದೇಶದ 65 ಕೋಟಿಗಿಂತ ಹೆಚ್ಚು ಜನರು ಕೃಷಿ ಅವಲಂಬಿಸಿದ್ದು, ನಮ್ಮ ವಾರ್ಷಿಕ ಆಹಾರ ಉತ್ಪಾದನೆಯ 332 ಮಿಲಿಯನ್ ಟನ್ ಆಹಾರ ಧಾನ್ಯಗಳು, 355 ಮಿಲಿಯನ್ ಟನ್ ಹಣ್ಣು ಮತ್ತು ತರಕಾರಿಗಳು, 231 ಲೀಟರ್ ಹಾಲು, 10 ಮಿಲಿಯನ್ ಟನ್ ಮಾಂಸ, 18 ಮಿಲಿಯನ್ ಟನ್ ಮೀನು ಹಾಗೂ 120 ಬಿಲಿಯನ್ ಮೊಟ್ಟೆ ಇತ್ಯಾದಿಗಳು ಸೇರಿ 1000 ಮಿಲಿಯನ್ ಟನ್‌ಗಳಷ್ಟು ಆಹಾರವಾಗುತ್ತದೆ. ಉದ್ದಿಮೆಯಾಗಲಿ, ಇಂಧನವಾಗಲಿ, ಸಂವಹನವಾಗಲಿ, ಅಂತರ್ಜಾಲ ಆಧಾರಿತ ಕೃತಕ ಬುದ್ಧಿಮತ್ತೆ ಅಥವಾ ನಾವೀನ್ಯಪೂರ್ಣ ಬದಲಾವಣೆಗಳ ಯಾವುದೇ ವಲಯವಾಗಿರಲಿ, ಅಲ್ಲಿ ಮಾನವ ಪ್ರತಿಭೆ, ಉತ್ಸಾಹ ಮತ್ತು ಉದ್ಯಮಶೀಲತೆಯು ಪುನರುಜ್ಜಿವನಗೊಳ್ಳುತ್ತಿರುವುದನ್ನು ಗಮನಿಸಬಹುದಾಗಿದೆ ಎಂದರು.

ಕುಲಪತಿ ಕೆ.ಬಿ. ಗುಡಸಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಸಚಿವ ಕೆ.ಚನ್ನಪ್ಪ ಸುವರ್ಣ ಪದಕಗಳನ್ನು ಪಡೆದಿರುವ ವಿದ್ಯಾರ್ಥಿಗಳ ವಿವರವನ್ನು ನೀಡಿದರು. ಮೌಲ್ಯಮಾಪನ ಕುಲಸಚಿವ ನಿಜಲಿಂಗಪ್ಪ ಮಟ್ಟಿಹಾಳ ಪಿಎಚ್‌ಡಿ ಪದವಿ, ರ‍್ಯಾಂಕ್, ಶಿಷ್ಯವೇತನ ಮತ್ತು ನಗದು ಪಾರಿತೋಷಕ ಪ್ರಶಸ್ತಿ ಪ್ರಮಾಣವನ್ನು ಪಡೆದ ವಿದ್ಯಾರ್ಥಿಗಳ ವಿವರವನ್ನು ನೀಡಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರು, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮರೇಗುದ್ದಿಯ ನಿರುಪಾಧೀಶ ಮಹಾಸ್ವಾಮಿ, ಡಾ. ವೆಂಕಟಸತ್ಯ ವರಪ್ರಸಾದ ಚಿಗುರುಪಾಟಿ ಹಾಗೂ ಎಸ್.ಎನ್. ವೆಂಕಟಲಕ್ಷ್ಮೀ ನರಸಿಂಹರಾಜು ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ನೀಡಲಾಯಿತು.

ರಾಷ್ಟçಪಿತ ಮಹಾತ್ಮಾ ಗಾಂಧೀಜಿಯವರ ಗ್ರಾಮಸ್ವರಾಜ್ಯ ಕನಸನ್ನು ನನಸಾಗಿಸುವಂತೆ ಕರೆ ನೀಡಿದ ಅವರು, ಉತ್ತಮ ಶಿಕ್ಷಣ ಮತ್ತು ಜ್ಞಾನ, ಕೌಶಲ್ಯಪೂರ್ಣತೆ, ನಾವೀನ್ಯತೆ ಮತ್ತು ಸೇವಾ ಮನೋಭಾವ ಇವು ಇಂದಿನ ನಿರ್ಣಾಯಕ ಕಾಲಘಟ್ಟದ ಅವಶ್ಯಕತೆಗಳಾಗಿವೆ. ಇಂದಿನ ದಿನಗಳಲ್ಲಿ ಸದಾ ಚರ್ಚೆಯಲ್ಲಿರುವ ಹವಾಮಾನ ಬದಲಾವಣೆ, ಪರಿಸರ ಮಾಲಿನ್ಯ, ನೈಸರ್ಗಿಕ ಸಂಪನ್ಮೂಲ ಅವನತಿ, ಹಸಿವು ಮತ್ತು ಅಪೌಷ್ಠಿಕತೆ, ಸಂಭವನೀಯ ರೋಗಗಳು, ಮೈಕ್ರೋಪ್ಲಾಸ್ಟಿಕ್ಸ್, ಜನಸಂಖ್ಯಾ ಪ್ರಮಾಣ ಬದಲಾವಣೆ, ವಲಸೆ ಇತ್ಯಾದಿಗಳು ನಮ್ಮ ಭವಿಷ್ಯದ ಸವಾಲುಗಳಾಗಿವೆ ಎಂದು ಪ್ರೊ. ಎಸ್.ಅಯ್ಯಪ್ಪನ್ ಅಭಿಪ್ರಾಯಪಟ್ಟರು.


Spread the love

LEAVE A REPLY

Please enter your comment!
Please enter your name here