HomeCrime Newsಕಳ್ಳಭಟ್ಟಿ ಮದ್ಯಕ್ಕೆ 9 ಮಂದಿ ಬಲಿ: ಭಾವ್‌ನಗರದಲ್ಲಿ ಮೆಥನಾಲ್ ವಿಷ ಸೇವಿಸಿ 3 ಮಂದಿ ಗಂಭೀರ

ಕಳ್ಳಭಟ್ಟಿ ಮದ್ಯಕ್ಕೆ 9 ಮಂದಿ ಬಲಿ: ಭಾವ್‌ನಗರದಲ್ಲಿ ಮೆಥನಾಲ್ ವಿಷ ಸೇವಿಸಿ 3 ಮಂದಿ ಗಂಭೀರ

For Dai;y Updates Join Our whatsapp Group

ಭಾವ್‌ನಗರ (ಗುಜರಾತ್): ಕಳ್ಳಭಟ್ಟಿ ಮದ್ಯ ಸೇವನೆಯಿಂದ ಭಾವ್‌ನಗರ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಶುಕ್ರವಾರ ಮಧ್ಯರಾತ್ರಿ ಹಾರ್ದಿಕ್ ಕಿಲ್ಜಿ ಎಂಬವರು ಮೃತಪಟ್ಟಿದ್ದು, ಇನ್ನೂ ಮೂವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ಜಿಲ್ಲಾಡಳಿತದ ಮಾಹಿತಿ ಪ್ರಕಾರ, 17 ಮಂದಿ ಸರ್ಕಾರಿ ಆಸ್ಪತ್ರೆಯಲ್ಲಿ ಹಾಗೂ ಆರು ಮಂದಿ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 17 ಮಂದಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಸಂತ್ರಸ್ತರು ಮೆಥನಾಲ್ ವಿಷಪೂರಿತ ಪ್ರಮಾಣ ಹೊಂದಿದ್ದ ಕಳ್ಳಭಟ್ಟಿ ಮದ್ಯ ಸೇವಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಭಾರತದಲ್ಲಿ ತಯಾರಾಗುವ ಜನಪ್ರಿಯ ವಿದೇಶಿ ಮದ್ಯದ ಬ್ರ್ಯಾಂಡ್‌ಗಳ ಬಾಟಲಿಗಳಲ್ಲಿ ಕಳ್ಳಭಟ್ಟಿ ಮದ್ಯವನ್ನು ತುಂಬಿ ಮಾರಾಟ ಮಾಡಲಾಗಿತ್ತು. ಇದೇ ಮದ್ಯವನ್ನು ಸಂತ್ರಸ್ತರು ಸೇವಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವಿಧಿವಿಜ್ಞಾನ ಪ್ರಯೋಗಾಲಯದ ಪರೀಕ್ಷೆಯಲ್ಲಿ ಮದ್ಯದ ಮಾದರಿಯಲ್ಲಿ ಶೇ.38.59ರಷ್ಟು ಮೆಥನಾಲ್ ಹಾಗೂ ಶೇ.0.94ರಷ್ಟು ಎಥನಾಲ್ ಇರುವುದು ದೃಢಪಟ್ಟಿದೆ. ಮೆಥನಾಲ್‌ನ ವಿಷಕಾರಿ ಪ್ರಮಾಣವೇ ಸಾವು ಮತ್ತು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿರುವ ಶಂಕೆ ವ್ಯಕ್ತವಾಗಿದೆ.

ಪ್ರಕರಣದಲ್ಲಿ ಒಟ್ಟು 21 ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಗಿದ್ದು, ಈ ಪೈಕಿ 13 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ತನಿಖೆಯನ್ನು ಗುಜರಾತ್ ಪೊಲೀಸ್ ಇಲಾಖೆಯ ರಾಜ್ಯ ಮೇಲ್ವಿಚಾರಣಾ ಘಟಕಕ್ಕೆ ವಹಿಸಲಾಗಿದೆ.

ಗುಜರಾತ್‌ನಲ್ಲಿ ಮದ್ಯ ನಿಷೇಧ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಮದ್ಯದ ತಯಾರಿಕೆ, ಮಾರಾಟ ಹಾಗೂ ಸೇವನೆ ಕಾನೂನುಬಾಹಿರವಾಗಿದೆ. ಈ ನಡುವೆ ಕಳ್ಳಭಟ್ಟಿ ಮದ್ಯದಿಂದ ಸಂಭವಿಸಿರುವ ಸರಣಿ ಸಾವುಗಳು ರಾಜ್ಯದಲ್ಲಿ ಆತಂಕಕ್ಕೆ ಕಾರಣವಾಗಿವೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img