Homecultureನಮ್ಮ ಪ್ರಾರ್ಥನೆಯಿಂದ ಸಮೃದ್ಧಿ ಲಭಿಸಲಿ : ಖಾದರಸಾಬ ಮುಲ್ಲಾ

ನಮ್ಮ ಪ್ರಾರ್ಥನೆಯಿಂದ ಸಮೃದ್ಧಿ ಲಭಿಸಲಿ : ಖಾದರಸಾಬ ಮುಲ್ಲಾ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಡಂಬಳ : ಪ್ರತಿಯೊಬ್ಬ ಮುಸ್ಲಿಮರು ಐದು ಕಡ್ಡಾಯ ಆಚರಣೆಗಳನ್ನು ಮಾಡುವುದು ಮತ್ತು ಎಲ್ಲಾ ಧರ್ಮದವರೊಂದಿಗೂ ಭಾವೈಕ್ಯತೆಯಿಂದ ಇರುವುದು ಕರ್ತವ್ಯವಾಗಿದೆ. ನಮ್ಮೀ ಪ್ರಾರ್ಥನೆಯಿಂದ ಕನ್ನಡ ನಾಡಿನಾದ್ಯಂತ ಉತ್ತಮ ಮಳೆ-ಬೆಳೆ ಆಗುವುದರ ಮೂಲಕ ಸಮೃದ್ಧಿಯಾಗಲಿ ಎಂದು ಧರ್ಮಗುರುಗಳಾದ ಖಾದರಸಾಬ ಮುಲ್ಲಾ ಹೇಳಿದರು.

ಡಂಬಳ ಗ್ರಾಮದಿಂದ ಗದಗ ನಗರಕ್ಕೆ ಹೋಗುವ ರಸ್ತೆ ಪಕ್ಕ ಇರುವ ಈದ್ಗಾ ಮೈದಾನದಲ್ಲಿ ರಂಜಾನ ಹಬ್ಬದ ಪ್ರಯುಕ್ತ ಪ್ರಾರ್ಥನೆ ಸಲ್ಲಿಸಿ ಮಾತನಾಡಿದ ಅವರು, ಪವಿತ್ರ ರಂಜಾನ್ 30 ದಿನಗಳ ಕಠಿಣ ಉಪಾವಾಸ ವೃತವನ್ನು ಸಂಪೂರ್ಣವಾಗಿ ಮಾಡಿದ ಭಕ್ತನಿಗೆ ಇಂದು ಅವನ ಪರಿಶ್ರಮದ ಬೆಲೆಯನ್ನು ಪಡೆಯುವಂತಹ ಪವಿತ್ರ ದಿನವಾಗಿದೆ ಎಂದು ಹೇಳಿದರು.

ಅಂಜುಮನ್ ಕಮಿಟಿ ಅಧ್ಯಕ್ಷ ಬಶೀರಹಮ್ಮದ ತಾಂಬೋಟಿ ರಂಜಾನ್ ತಿಂಗಳ ನಿಮಿತ್ಯ ಮಸೀದಿಗೆ ದೇಣಿಗೆ ನೀಡಿದ ದಾನಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಧರ್ಮಗುರು ಖಾದರಸಾಬ ಮುಲ್ಲಾ ಅವರು ಪವಿತ್ರ ನಮಾಜನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಖಾಜಾಹುಸೇನ ಹೋಸಪೇಟಿ, ರಾಯಸಾಬ ದೊಡ್ಡಮನಿ, ರಾಯಸಾಬ ಹೊಂಬಳ, ಅಲ್ಲಿಸಾಬ ಸರಕಾವಾಸ, ಹುಸೇನಸಾಬ ಮೂಲಿಮನಿ, ಬುಡ್ನೆಸಾಬ ಅತ್ತಾರ, ಜಾಕೀರ ಮೂಲಿಮನಿ, ಹುಸೇನಸಾಬ ದೊಡ್ಡಮನಿ, ಬಾಬುಸಾಬ ಸರಕಾವಾಸ, ಬುಡ್ನೆಸಾಬ ಜಲಾಲನವರ, ಬಾಬು ಮೂಲಿಮನಿ, ಎಮ್.ಆರ್. ಆಲೂರ, ಮಹಮ್ಮದರಪೀಕ ಹೋಸಪೇಟ, ರಪೀಕಸಾಬ ತಾಂಬೋಟಿ, ಜಂದಿಸಾಬ ಸರಕಾವಾಸ, ರಾಯಸಾಬ ಕಾಸ್ತಾರ, ಹುಸೇನಸಾಬ ಹೋಸಬಾವಿ, ಅಬ್ದುಲ ಮಕಾಂದಾರ, ಅಲ್ಲಾವುದ್ದಿನ್ ಹೊಂಬಳ, ರಜಾಕಸಾಬ ತಾಂಬೋಟಿ, ಮುರ್ತುಜಾ ಮನಿಯಾರ, ದಾವಲಸಾಬ ಸೊರಟೂರ, ಪಿರೋಜಖಾನ ಹೋಸಪೇಟಿ, ಪೀರಸಾಬ ಮಕಾಂದಾರ, ಬಿ.ಕೆ. ಕಾಸ್ತಾರ ಮುಂತಾದವರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img