Homesocial serviceಧರ್ಮಸ್ಥಳ ಸಂಸ್ಥೆಯಿಂದ ವ್ಹೀಲ್‌ಚೇರ್ ವಿತರಣೆ

ಧರ್ಮಸ್ಥಳ ಸಂಸ್ಥೆಯಿಂದ ವ್ಹೀಲ್‌ಚೇರ್ ವಿತರಣೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕಡಕೋಳ ಗ್ರಾಮದ ಸುಶೀಲಮ್ಮ ಕಮ್ಮಾರ ಅವರಿಗೆ ವ್ಹೀಲ್ ಚೇರ್ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕಾ ಯೋಜನಾಧಿಕಾರಿ ಪುನೀತ್ ಓಲೇಕಾರ, ಕಳೆದ ನಾಲ್ಕು ವರ್ಷಗಳ ಹಿಂದೆ ರಸ್ತೆ ಅಪಘಾತದಿಂದ ತಮ್ಮ ಕಾಲುಗಳಲ್ಲಿ ನಡೆದಾಡುವ ಶಕ್ತಿಯನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ, ಡಾ. ವೀರೇಂದ್ರ ಹೆಗ್ಗಡೆ ಮತ್ತು ಅಮ್ಮನವರು ಜನ ಮಂಗಳ ಕಾರ್ಯಕ್ರಮದಡಿ ಕೊಡ ಮಾಡಿರುವ ವ್ಹೀಲ್‌ಚೇರ್ ಮತ್ತು ಪರಿಕರಗಳನ್ನು ವಿತರಿಸಲಾಗಿದೆ. ಇದರಿಂದ ಈ ಕುಟುಂಬಕ್ಕೆ ಹೊಸಚೈತನ್ಯ ಬಂದಂತಾಗಿದೆ ಎಂದರು.

ಪ.ಪಂ ಸದಸ್ಯ ಫಕ್ಕೀರೇಶ ರಟ್ಟಿಹಳ್ಳಿ, ಮರಿಯಪ್ಪ ಎಸ್, ಯಲ್ಲಮ್ಮ ಬಿ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img