HomeGadag Newsಕಣ್ಣಿನ ಉಚಿತ ತಪಾಸಣಾ ಶಿಬಿರ

ಕಣ್ಣಿನ ಉಚಿತ ತಪಾಸಣಾ ಶಿಬಿರ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ :ಹಿಂದುಳಿದ ವರ್ಗ ಹಾಗೂ ಮಧ್ಯಮ ವರ್ಗದ ಜನತೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕಣ್ಣಿನ ಸಮಸ್ಯೆಯನ್ನು ತೋರಿಸಿಕೊಳ್ಳಲು ಸಾಮರ್ಥ್ಯವಿಲ್ಲದ ಬಡ ಜನತೆಗೆ ಅನುಕೂಲವಾಗಲೆಂದು ವಾಸನ್ ಐಕೇರ್ ಆಸ್ಪತ್ರೆ ವತಿಯಿಂದ ಉಚಿತ ಶಿಬಿರ ಏರ್ಪಡಿಸಿದ್ದು, ಶಿಬಿರದ ಲಾಭವನ್ನು ಎಲ್ಲರೂ ಪಡೆದುಕೊಳ್ಳಿ ಎಂದು ಕಣ್ಣಿನ ವೈಧ್ಯಾಧಿಕಾರಿ ಹೆಚ್.ಎಸ್. ನಾಗರಾಜ್ ತಿಳಿಸಿದರು.

ತಾಲೂಕಿನ ಅರಸೀಕೆರೆ ಹೋಬಳಿಯ ತೌಡೂರು ಗ್ರಾಮದಲ್ಲಿ ಶನಿವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ದಾವಣಗೆರೆ ವಾಸನ್ ಐಕೇರ್ ಕಣ್ಣಿನ ಆಸ್ಪತ್ರೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನುದ್ದೇಶಿಸಿ ಅವರು ಮಾತನಾಡಿದರು.

ಮನುಷ್ಯನಿಗೆ ದೇಹದಲ್ಲಿ ಕಣ್ಣು ಪ್ರಮುಖವಾದ ಅಂಗವಾಗಿದೆ. ಜೀವನದ ಅಂತ್ಯದವರೆಗೂ ಅದರ ಅವಶ್ಯಕತೆ ಎಲ್ಲರಿಗೂ ಇದ್ದು, ಪ್ರತಿಯೊಬ್ಬರೂ ಕಣ್ಣಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಈ ರೀತಿಯ ಉಚಿತ ಶಿಬಿರಗಳಲ್ಲಿ ಗ್ರಾಮೀಣ ಭಾಗದ ಜನರು ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

ಯರಬಳ್ಳಿ ಗ್ರಾಮದ ಮುಖಂಡ ಉಮಾಪತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೊಟ್ರುಗೌಡ, ಕೆ.ಎಮ್. ಮಂಜುನಾಥಯ್ಯ, ಕೆಂಚಪ್ಪ, ಶೆಟ್ಟಿನಾಯ್ಕ, ಕೊಟ್ರುಗೌಡ, ದೊಡ್ಡ ಸಿದ್ದಪ್ಪ, ಕೆ.ಪರುಸಪ್ಪ, ಹನುಮಂತಪ್ಪ, ಬಸವರಾಜ್, ಕಾವ್ಯ, ಮನೋಜ್ ಇತರರಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!