HomeGadag Newsಜಿಮ್ಸ್ ನಿಂದ ಇ-ಪೋಸ್ಟರ್ ಸ್ವರ್ಧೆ

ಜಿಮ್ಸ್ ನಿಂದ ಇ-ಪೋಸ್ಟರ್ ಸ್ವರ್ಧೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ವಿಶ್ವ ಜನಸಂಖ್ಯಾ ದಿನದ ಅಂಗವಾಗಿ, ಸಮುದಾಯ ವೈದ್ಯಕೀಯ ವಿಭಾಗದಿಂದ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಇ-ಪೋಸ್ಟರ್ ರಚನೆ ಸ್ಪರ್ಧೆಯನ್ನು ನಡೆಸಲಾಯಿತು.

ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಗೀರೀಶ ನಾಗರಾಳ, ಚರ್ಮ ವಿಭಾಗದ ಮುಖ್ಯಸ್ಥ ಡಾ. ಅರವಿಂದ್ ಕೆ, ಸ್ಪರ್ಧೆಗೆ ತೀರ್ಪುಗಾರರಾಗಿದ್ದರು. ಸಮುದಾಯ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ರಮೇಶ ಮಾಯಪ್ಪನವರ್ ಮತ್ತು ಡಾ. ರುದ್ರಮ್ಮ ಜೆ ಮಾರ್ಗದರ್ಶನದಲ್ಲಿ ಒಟ್ಟು 40 ವಿದ್ಯಾರ್ಥಿಗಳು ತಮ್ಮ ಇ-ಪೋಸ್ಟರ್‌ಗಳೊಂದಿಗೆ ಜನಸಂಖ್ಯೆಯ ಅಪಾಯಕಾರಿ ಹೆಚ್ಚಳದ ಮತ್ತು ನಿಯಂತ್ರಣವನ್ನು ಪ್ರತಿನಿಧಿಸುವ ಸ್ಪರ್ಧೆಯಲ್ಲಿ ಭಾಗವಹಿಸಿದರು. ಕುಟುಂಬ ದತ್ತು ಕಾರ್ಯಕ್ರಮದ ಅಡಿಯಲ್ಲಿ ವಿಧ್ಯಾರ್ಥಿಗಳು ಜನಸಂಖ್ಯೆಯ ಹೆಚ್ಚಳದ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಿ, ಕುಟುಂಬ ಯೋಜನೆ ವಿಧಾನಗಳನ್ನು ಅವಳಡಿಸಿಕೊಳ್ಳಲು ದಂಪತಿಗಳನ್ನು ಪ್ರೇರೇಪಿಸುತ್ತಿದ್ದಾರೆ.

ಜಿಮ್ಸ್ ನಿರ್ದೇಶಕರಾದ ಡಾ. ಬಸವರಾಜ ಪಿ ಬೊಮ್ಮನಹಳ್ಳಿ, ಪ್ರಾಂಶುಪಾಲರಾದ ಡಾ. ರಾಜು ಜಿ.ಎಂ, ಡಾ. ರೇಖಾ ಸೋನಾವನೆ, ಸಮುದಾಯ ವೈದ್ಯ ವಿಭಾಗದ ಮುಖ್ಯಸ್ಥರು ಹಾಗೂ ಜಿಲ್ಲಾ ಶಸ್ತç ಚಿಕಿತ್ಸಕರಾದ ಡಾ. ಬಿ.ಸಿ. ಕರಿಗೌಡರ ಉಪಸ್ಥಿತರಿದ್ದು, ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ಶ್ಲಾಘಿಸಿ ವಿಜೇತರನ್ನು ಅಭಿನಂದಿಸಿದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img