HomeGadag Newsಡಾ. ಬಿ.ಎಸ್. ರಾಠೋಡ್, ಆದೆಪ್ಪನವರಿಗೆ ಸನ್ಮಾನ

ಡಾ. ಬಿ.ಎಸ್. ರಾಠೋಡ್, ಆದೆಪ್ಪನವರಿಗೆ ಸನ್ಮಾನ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಸರ್ವೋದಯ ಶಾಲೆ ಹಾಗೂ ಎಕ್ಸಲೆಂಟ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಇವುಗಳ ಸಂಯೋಗದಲ್ಲಿ ವಿದ್ಯಾದಾನ ಸಮಿತಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ಪದನ್ನೋತಿ ಹೊಂದಿದ ಕ್ಯಾಪ್ಟನ್ ಡಾ. ಬಿ.ಎಸ್. ರಾಠೋಡ್‌ರವರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು. ಇದೇ ಸಂದರ್ಭದಲ್ಲಿ ಸೇವಾ ನಿವೃತ್ತಿ ಹೊಂದಿದ ಮುಖೋಪಾಧ್ಯಾಯ ಎಚ್.ಬಿ. ಆದೆಪ್ಪನವರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಗದಗ ಜಿಲ್ಲಾ ಬಂಜಾರ ಅಭಿವೃದ್ಧಿ ವೇದಿಕೆ ಅಧ್ಯಕ್ಷರು ಕ್ಯಾಪ್ಟನ್ ಡಾ. ಬಿ.ಎಸ್. ರಾಠೋರವರಿಗೆ ಪದನ್ನೋತಿ ಹೊಂದಿದ್ದಕ್ಕೆ ಶುಭಾಶಯ ಕೋರಿದರು. ಸೇವಾ ನಿವೃತ್ತಿ ಹೊಂದಿದ ಎಚ್.ಬಿ. ಆದಪ್ಪನವರಿಗೆ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ಡಿ.ಎಸ್. ಸೂರಪ್ಪಗೌಡ್ರ, ಹಿರಿಯರಾದ ಕುಬೇರಪ್ಪ ಪವಾರ, ದಾಮಲಪ್ಪ ನಾಯಕ, ರಮೇಶ ಚವ್ಹಾಣ, ಬಸವರಾಜ ಹಿರೇಹಡಗಲಿ, ಗೋಪಾಲ ಬಡಿಗೇರ, ಎಂ.ಆರ್.ಲಮಾಣಿಸರ್, ಭೋಜಪ್ಪ ಲಮಾಣಿ ಸೇರಿದಂತೆ ಶಾಲಾ ಶಿಕ್ಷಕ, ಶಿಕ್ಷಕಿಯರು ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯೆ ಪ್ರೇಮಾ ರಾಠೋಡ ಸ್ವಾಗತಿಸಿದರು. ಶಕುಂತಲಾ ರಾಠೋಡ ಕಾರ್ಯಕ್ರಮ ನಿರೂಪಿಸಿದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!