ನೆಲಮಂಗಲ:- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ತೊಣಚಿನಕುಪ್ಪೆ ಗ್ರಾಮದಲ್ಲಿ ಹೆಂಡತಿಯ ಮೇಕಪ್ ನಿಂದ ಮನನೊಂದು ಗಂಡ ಸೂಸೈಡ್ ಮಾಡಿಕೊಂಡ ಘಟನೆ ಜರುಗಿದೆ.
ಅಸ್ಸಾಂ ಮೂಲದ ಗುಲ್ಜರ್ ಹುಸೇನ್ ಚೌದರಿ (28)ಮೃತ ವ್ಯಕ್ತಿ. ಇತ ಮೂರು ವರ್ಷಗಳ ಹಿಂದೆ ಕುಲ್ಸುಮ್ ಬೇಗಂ ಎಂಬುವವರ ಜೊತೆ ಮದುವೆ ಮಾಡಿಕೊಂಡಿದ್ದ. ಜೀವನ ಸಾಗಿಸುವ ನಿಟ್ಟಿನಲ್ಲಿ ನೆಲಮಂಗಲಕ್ಕೆ ಬಂದು ಖಾಸಗಿ ಟ್ರಾನ್ಸ್ಪೋರ್ಟ್ ಕಂಪನಿಯಲ್ಲಿ ಮೃತ ಗುಲ್ಜರ್ ಡ್ರೈವರ್ ಆಗಿದ್ದ. ಇದೀಗ ಪತ್ನಿ ನಿದ್ರಿಸುವ ವೇಳೆ ನೇಣಿಗೆ ಶರಣಾಗಿದ್ದಾನೆ. ಈ ಕುರಿತು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



