HomeSports NewsHardik Pandya: ಡಿವೋರ್ಸ್ ಖಚಿತಪಡಿಸಿದ ಹಾರ್ದಿಕ್ ಪಾಂಡ್ಯ-ನತಾಶ ಜೋಡಿ!

Hardik Pandya: ಡಿವೋರ್ಸ್ ಖಚಿತಪಡಿಸಿದ ಹಾರ್ದಿಕ್ ಪಾಂಡ್ಯ-ನತಾಶ ಜೋಡಿ!

For Dai;y Updates Join Our whatsapp Group

Spread the love

ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ದಿನಗಳಿಂದ ಹಬ್ಬಿದ್ದ ಡಿವೋರ್ಸ್ ವದಂತಿಗೆ ಹಾರ್ದಿಕ್ ಪಾಂಡ್ಯ ಸ್ಪಷ್ಟಪಡಿಸಿದರು.

ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ಡಿವೋರ್ಸ್ ಪಡೆದಿರುವುದಾಗಿ ಪಾಂಡ್ಯ ಖಚಿತಪಡಿಸಿದ್ದಾರೆ. ಈ ಕರಿತು ತಮ್ಮ ಇನ್‌ಸ್ಟಾಗ್ರಾಂ ಮೂಲಕ ಹಾರ್ದಿಕ್ ಪಾಂಡ್ಯ ಭಾವುಕ ಪೋಸ್ಟ್ ಹಾಕಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ನತಾಶ್ ಹಾಗಾ ನಾನು ಜೊತೆಯಾಗಿ ಹೆಜ್ಜೆ ಹಾಕಿದ್ದೇವು. ಆದರೆ ಇದೀಗ ಹಲವು ಕಾರಣಗಳಿಂದ ನಾವಿಬ್ಬರು ಪರಸ್ಪರ ಒಪ್ಪಿಗೆಯಿಂದ ದೂರ ಸರಿಯುತ್ತಿದ್ದೇವೆ. ನಾವು ಜೊತೆಯಾಗಿರವು ಹಲವು ಪ್ರಯತ್ನ ನಡೆಸಿದ್ದೇವೆ. ಇದೀಗ ಇಬ್ಬರ ಉತ್ತಮ ಭವಿಷ್ಯಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಡಿವೋರ್ಸ್ ನಮಗೆ ಸುಲಭದ ನಿರ್ಧಾರವಾಗಿರಲಿಲ್ಲ. ಜೊತೆಯಾಗಿ ನಾವು ಹಲವು ಸಂತಸದ ಕ್ಷಣಗಳನ್ನು ಕಳೆದಿದ್ದೇವೆ. ಪರಸ್ಪರ ಗೌರವಿಂದ ಕಂಡಿದ್ದೇವೆ. ಉತ್ತಮ ಸಂಗಾತಿಯಾಗಿ ಮುನ್ನಡೆದಿದ್ದೇವೆ. ಒಂದು ಕುಟುಂಬವಾಗಿ ನಾವು ಹೆಜ್ಜೆ ಹಾಕಿದ್ದೇವೆ. ನಮ್ಮಿಬ್ಬರಿಗೆ ಮಗ ಅಗಸ್ತ್ಯನಿದ್ದಾನೆ. ಆಗಸ್ತ್ಯ ನಮ್ಮಿಬ್ಬರ ಪ್ರಮುಖ ಕೇಂದ್ರಬಿಂದುವಾಗಿ ಮುಂದುವರಿಯುತ್ತಾನೆ. ಆತನಿಗೆ ನಾವಿಬ್ಬರು ಪೋಷಕರಾಗಿದ್ದೇವೆ. ಆತನ ಜವಾಬ್ದಾರಿ ನಮ್ಮಿಬ್ಬರಿಗೂ ಇದೆ. ಆತನ ಖುಷಿ, ಸಂತೋಷಕ್ಕೆ ನಾವು ಎಲ್ಲವನ್ನೂ ಮಾಡುತ್ತೇವೆ. ಈ ಸಂದರ್ಭದಲ್ಲಿ ನಾವು ಎಲ್ಲರಲ್ಲಿ ಕಳಕಳಿಯ ಮನವಿ ಮಾಡುತ್ತೇವೆ. ನಮ್ಮ ಖಾಸಗಿ ಕ್ಷಣಗಳಿಗೆ ಗೌರವ ನೀಡಿ. ಈ ಕಠಿಣ ಸಂದರ್ಭದಲ್ಲಿ ನಮ್ಮನ್ನು ಅರ್ಥ ಮಾಡಿಕೊಂಡು ನಮ್ಮ ಬೆಂಬಲಕ್ಕೆ ನಿಲ್ಲುತ್ತೀರಿ ಎಂದು ಭಾವಿಸುತ್ತೇನೆ ಎಂದು ಹಾರ್ದಿಕ್ ಪಾಂಡ್ಯ ಪೋಸ್ಟ್ ಮಾಡಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!